ಉಡುಪಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹೆಸರಲ್ಲಿರುವ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ತೆಗೆದಿರುವುದು ಅತ್ಯಂತ ಖಂಡನೀಯ .ದೇಶದಲ್ಲಿ ಗಾಂಧೀಜಿ ಹೆಸರನ್ನು ಶಾಶ್ವತವಾಗಿ ಅಳಿಸಬೇಕೆಂದು ಅವರ ಇಚ್ಛೆ ಸ್ಪಷ್ಟವಾಗಿದೆ .ಗಾಂಧೀಜಿ ಗ್ರಾಮೀಣ ಜನರ ,ಬಡವರ ಬಗ್ಗೆ ಕಾಳಜಿ,
ಬಡತನ ನಿರ್ಮೂಲನೆಯ ಕುರಿತ ಮಹಾನ್ ಚಿಂತನೆ ಉಳ್ಳ ವ್ಯಕ್ತಿ ಮತ್ತು ಶಕ್ತಿಯಾಗಿ ವಿಶ್ವ ನಾಯಕರಾಗಿ ಪೂಜಿಸಲ್ಪಟ್ಟವರು .ಬೇರೇನೂ ಮಾಡದೇ ಕೇವಲ ಹೆಸರು ಬದಲಾವಣೆ ಮಾಡುವ ಮೂಲಕ ಸರ್ಕಾರ ನಡೆಸುತ್ತಿರುವ ಇವರಿಗೆ ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಜನರೇ ಸೂಕ್ತ ಉತ್ತರ ನೀಡಲಿದ್ದಾರೆ. ಈ ದೇಶದಲ್ಲಿ ಗಾಂಧೀಜಿ ಏನು ಮಾಡಿದ್ದಾರೆ ಎಂಬುದು ಪ್ರತಿಯೊಬ್ಬ ಭಾರತೀಯನಿಗೂ ಗೊತ್ತಿದೆ. ಇತಿಹಾಸ ತಿಳಿಯದ ,ದೇಶ ಕಟ್ಟಿದವರಿಗೆ ಗೌರವ ಕೊಡದ ಬಿಜೆಪಿ ಸರ್ಕಾರಕ್ಕೆ ದಿಕ್ಕಾರವಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಅಲೆವೂರು ಹರೀಶ್ ಕಿಣಿ ಮತ್ತು ಜಿಲ್ಲಾ ಮುಖ್ಯ ಸಂಯೋಜಕರಾದ ಶ್ರೀಧರ್ ಪಿ ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
