ದೊಡ್ಡಬಳ್ಳಾಪುರ:ದರ್ಗಾಜೋಗಹಳ್ಳಿ ಗ್ರಾಮ ಪಂಚಾಯತಿ ವಾರ್ಡ್ ಗಳಲ್ಲಿ ಸಮಸ್ಯೆಗಳ ಬಗ್ಗೆ SDPI ಮನವಿ



ದೊಡ್ಡಬಳ್ಳಾಪುರ: ದರ್ಗಾಜೋಗಹಳ್ಳಿ 8ನೇ ವಾರ್ಡ್‌ನಲ್ಲಿ ಚರಂಡಿಗಳು ತುಂಬಿ ಮಲಿನ ನೀರು ಮನೆಗಳಿಗೆ ನುಗ್ಗುತ್ತಿದೆ. ಅಲ್ಲದೆ ಚರಂಡಿಗಳಿಗೆ ಪಿಟ್‌ನ ನೀರು ಕೂಡ ಹರಿದು ಬರುತ್ತಿದೆ. ಈ ಮಲಿನ ನೀರಿನ ಕಾರಣದಿಂದ ನಾವು ಮತ್ತು ನಮ್ಮ ಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದೇವೆ. ಈ ಗಂಭೀರ ಸಮಸ್ಯೆಗಳ ಬಗ್ಗೆ ಪಂಚಾಯಿತಿ ಸದಸ್ಯರು ಯಾರೂ ಸಹ ಸ್ಪಂದಿಸುತ್ತಿಲ್ಲ.

ಆದ್ದರಿಂದ ದಯವಿಟ್ಟು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಆರೋಗ್ಯ ನಿರೀಕ್ಷಕರು ಈ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಿ, ಚರಂಡಿಗಳನ್ನು ಸ್ವಚ್ಛಗೊಳಿಸಿ ಕಿತ್ತು ಕೆಟ್ಟು ಹೋಗಿರುವ ಚರಂಡಿಗಳನ್ನು ಹೊಸದಾಗಿ ಸರಿಪಡಿಸಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ದೊಡ್ಡಬಳ್ಳಾಪುರ ವತಿಯಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ನೀಡಲಾಯಿತು.

ಅಧ್ಯಕ್ಷರು ಫಯಾಜ್,ಪ್ರಧಾನ ಕಾರ್ಯದರ್ಶಿ ನೂರ್ ಅಹಮದ್,ಜಿಲ್ಲಾ ನಾಯಕರು ಸೈಯದ್ ಬಾಬಾ,ಸದಸ್ಯರು ಮುಬಾರಕ್, ಬಾಬಾಜನ್,ಶೋಯಬ್,ಮತ್ತು ವಾರ್ಡಿನ ಯುವಕರು,ಮಹಿಳೆಯರು,ಭಾಗವಹಿಸಿದ್ದರು.