ಶಿವಮೊಗ್ಗ: ಮದುವೆಯ ಮರುದಿನವೇ ಹೃದಯಾಘಾತದಿಂದ ವರ ಸಾವು !

ಮೃತ ರಮೇಶ್

ಶಿವಮೊಗ್ಗ: ಮದುವೆಯಾದ ಮರುದಿನವೇ ಮದುಮಗ ಹೃದಯಾಘಾತದಿಂದ ಮೃತಪಟ್ಟ ದಾರುಣ ಘಟನೆ ಭದ್ರಾವತಿ ತಾಲೂಕು ಹೊಳೆಹೊನ್ನೂರು ಸಮೀಪದ ಹನುಮಂತಾಪುರದಲ್ಲಿ ಸಂಭವಿಸಿದೆ.

ರಮೇಶ್‌(30) ಮೃತಪಟ್ಟವರು. ಭಾನುವಾರ ಹರಪನಹಳ್ಳಿ ಸಮೀಪದ ಬಂಡ್ರಿಯ ಯುವತಿಯನ್ನು ರಮೇಶ್ ಮದುವೆಯಾಗಿದ್ದರು. ವಧುವಿನ ಮನೆಗೆ ನವ ದಂಪತಿ ತೆರಳಿದ್ದಾರೆ. ದೇವರ ಕೋಣೆಗೆ ಹೋಗಿ ಕೈಮುಗಿದು ಹೊರ ಬರುತ್ತಿದ್ದಂತೆ ರಮೇಶ್ ಹೃದಯಾಘಾತದಿಂದ ಕುಸಿತು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಗೆ ಕರೆದೊಯ್ಯುವ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗಿದೆ. ಮಂಗಳವಾರ ಹೊಳೆಹೊನ್ನೂರು ಸಮೀಪದ ಹೊಸಕೊಪ್ಪದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.