ದೊಡ್ಡಬಳ್ಳಾಪುರ ಮುಸ್ಲಿಂ ಯೂತ್ ಅಸೋಸಿಯೇಷನ್ ಗೆ ಸೆಲೆಕ್ಷನ್ ಬೇಡ, ಎಲೆಕ್ಷನ್ ಬೇಕು- ಮುಸ್ಲಿಂ ಮುಖಂಡರ ಆಗ್ರಹ

ಮುಸ್ಲಿಂ ಮುಖಂಡರ ಸಭೆ


ದೊಡ್ಡಬಳ್ಳಾಪುರ ಮುಸ್ಲಿಂ ಯೂತ್ ಅಸೋಸಿಯೇಷನ್ ಗೆ ಸೆಲೆಕ್ಷನ್ ಬೇಡ, ಎಲೆಕ್ಷನ್ ಮಾಡಿ ಎಂದು ಮುಸ್ಲಿಂ ಮುಖಂಡರು ಒತ್ತಾಯಿಸಿದ್ದಾರೆ.

ಮುಸ್ಲಿಂ ಯೂತ್ ಅಸೋಸಿಯೇಷನ್ ಗೆ ಅಡಾಪ್ಟ್ ಕಮಿಟಿ ಮಾಡುವ ಪ್ರಯತ್ನವನ್ನು ವಿರೋಧಿಸಿ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ತಾಲ್ಲೂಕಿನಲ್ಲಿ ಮುಸ್ಲಿಂ ಸಮುದಾಯ 25 ಸಾವಿರದಷ್ಟು ಜನಸಂಖ್ಯೆಯನ್ನು ಹೊಂದಿದೆ. 37 ಮಸೀದಿಗಳಿವೆ, ಎಲ್ಲ ಅಂಜುಮನ್ ಕಮಿಟಿಯ ಮಾಜಿ ಸದಸ್ಯರು ಹಾಗೂ (SDPI)ಪಕ್ಷದ  ತಾಲೂಕು ಪ್ರಧಾನ ಕಾರ್ಯದರ್ಶಿ ಗಳು ನೂರ್ ಅಹಮದ್ ಮಾತನಾಡಿ, ದೇಶದ ಸಂವಿಧಾನವನ್ನೇ ಕಾಲ ಕಾಲಕ್ಕೆ ಜನರ ಅನುಕೂಲಕ್ಕಾಗಿ ತಿದ್ದುಪಡಿ ಮಾಡಲಾಗುತ್ತಿದೆ. ಆದರೆ ಬೈಲಾ ದಲ್ಲಿರುವ ಸಣ್ಣ ಲೋಪವನ್ನು ತೋರಿಸಿ ಅಡಾಪ್ಟ್ ಕಮಿಟಿಗಳನ್ನೇ ಮಾಡುತ್ತಾ ಬರುತ್ತಿದ್ದಾರೆ. ತಾಲ್ಲೂಕಿನ ಸಮಗ್ರ ಮುಸ್ಲಿಮರನ್ನು ಪ್ರತಿನಿಧಿಸಬೇಕಾದ ವಕ್ಫ್ ಬೋರ್ಡ್ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ ಮಣೆ ಹಾಕುತ್ತಿದೆ ಎಂದು ಆಕ್ರೋಶ ಹೊರಹಾಕಿದರು.13 ವರ್ಷಗಳಿಂದ ಚುನಾವಣೆ ನಡೆಯದಂತೆ ಅಡ್ಡಿ ಆಗ್ತಿರುವ ಸಮಾಜ ದ್ರೋಹಿಗಳು ಹಾಗೂ ಅಡಾಪ್ಟ್ ಕಮಿಟಿ ಗಳು ಮಾಡಿಕೊಂಡು ಇಷ್ಟಾರಾಜ್ಯದ ಅಧಿಕಾರ ಮಾಡಿಕೊಂಡು ಸಮಾಜ ಅಭಿವೃದ್ಧಿ ಗೆ ಅಡ್ಡಿ ಆಗುತ್ತಿದ್ದಾರೆ. ಈಗ ನಗರದ ಎರಡು ವಾರ್ಡ್‌ಗಳಿಗಷ್ಟೇ ಚುನಾವಣೆ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.ಅಸೋಸಿಯೇಷನ್ ಗೆ ಕಳೆದ ಹದಿಮೂರು ವರ್ಷಗಳ ಹಿಂದೆ ಚುನಾವಣೆ ನಡೆದಿತ್ತು.

ಈ ಸಂದರ್ಭದಲ್ಲಿ SDPI ಪಕ್ಷದ ಅಧ್ಯಕ್ಷ ಫಯಾಜ್,ಉಪಾಧ್ಯಕ್ಷ ಇಮ್ರಾನ್,ಸೆಕ್ರೆಟರಿ ಇಲ್ಯಾಸ್ ಉಪಸ್ಥಿತರಿದ್ದರು.