ಉಡುಪಿ: ಪರಿಶಿಷ್ಟ ಜಾತಿ ಮತ್ತು ಪಂಗಡದ ಬಗ್ಗೆ ಅಧಿಕಾರಿಗಳಿಗೆ ದಿವ್ಯ ನಿರ್ಲಕ್ಷ್ಯ - ಮಂಜುನಾಥ ಗಿಳಿಯಾರು ಆರೋಪ

_

ಮಂಜುನಾಥ ಗಿಳಿಯಾರು

ಉಡುಪಿ: ಉಡುಪಿ ಜಿಲ್ಲೆಯ ಬಹುತೇಕ ಪಂಚಾಯತ್ ಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಆಲಿಸಲು ಯಾವುದೇ ವಿಶೇಷ ಗ್ರಾಮ ಸಭೆ ಕರೆಯುತ್ತಿಲ್ಲ. ಪ್ರತಿ ವರ್ಷ ವಿಶೇಷ ಗ್ರಾಮ ಸಭೆ ಕರೆಯಬೇಕು ಎಂದು ಕಾಯ್ದೆಯೇ ಹೇಳುತ್ತದೆ. ಆದರೆ ಜಿಲ್ಲೆಯಲ್ಲಿ ಇದು ಅನುಷ್ಠಾನಗೊಂಡಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು ಆರೋಪ ಮಾಡಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಅವರು ಜಿಲ್ಲಾಧಿಕಾರಿ ಸಹಿತ ಹಿರಿಯ ಅಧಿಕಾರಿಗಳ ಬೇಜವಾಬ್ದಾರಿಯೇ ಇದಕ್ಕೆ ಕಾರಣ.ಕೆಲವು ಕಡೆ ವಿಶೇಷ ಗ್ರಾಮ ಸಭೆಗಳನ್ನು ಕರೆದರೂ ಕಾಟಾಚಾರಕ್ಕೆ ಎಂಬಂತೆ ಇರುತ್ತದೆ. ಅದರಲ್ಲಿ ಅಧಿಕಾರಿಗಳು ಭಾಗವಹಿಸುವುದಿಲ್ಲ, ಪಿಡಿಒಗಳು ಭಾಗವಹಿಸುವುದಿಲ್ಲ.ಮುಖ್ಯವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಬಗ್ಗೆ ಅಧಿಕಾರಿಗಳಿಗೆ ಕಾಳಜಿಯೇ ಇಲ್ಲ.ಈ ಬಗ್ಗೆ ದೂರನ್ನು ಕೂಡ ಕೊಟ್ಟಿದ್ದೇವೆ. ತಕ್ಷಣ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ವಿಶೇಷ ಗ್ರಾಮ ಸಭೆಗಳನ್ನು ಕರೆದು ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಹವಾಲು ಆಲಿಸಬೇಕು. ಅವರಿಗೆ ಸಿಗಬೇಕಾದ ಸೂಕ್ತ ಅನುದಾನ ಮತ್ತು ಇತರ ಸವಲತ್ತುಗಳನ್ನು ನೀಡಬೇಕು. ತಪ್ಪಿದಲ್ಲಿ ಜಿಲ್ಲಾ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಮಂಜುನಾಥ ಗಿಳಿಯಾರು ಎಚ್ಚರಿಕೆ ನೀಡಿದ್ದಾರೆ.