ಉಡುಪಿ: ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ಮತ್ಸ್ಯೋದ್ಯಮಿಗಳ ನಡುವೆ ಮಲ್ಪೆ ಬಂದರಿನಲ್ಲಿ ಗುರುವಾರ ಹೊಡೆದಾಟ ನಡೆದಿದೆ.
ಬಾಕಿ ಇರುವ ಕೋಟ್ಯಾಂತರ ರೂಪಾಯಿ ದುಡ್ಡು ವಾಪಾಸು ಕೇಳಿದ ವಿಷಯಕ್ಕೆ ಜಯೇಶ್ ಕೋಟ್ಯಾನ್ ಎಂಬಾತ ಬೋಟು ಮಾಲೀಕ ಛೋಟಾ ಹರೀಶ್ ಎಂಬಾತನಿಗೆ ಮಲ್ಪೆ ಬಂದರಿನಲ್ಲಿ ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದು, ಇಬ್ಬರ ನಡುವೆ ಹೊಡೆದಾಟ ನಡೆದಿದೆ.
ಬಳಿಕ ಇಬ್ಬರೂ ಉಡುಪಿಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ನಾಲ್ವರು ಛೋಟಾ ಹರೀಶ್ ಬೆಂಬಲಿಗರು ಅಜ್ಜರಕಾಡಿನ ಸರಕಾರಿ ಆಸ್ಪತ್ರೆಗೆ ಆಗಮಿಸಿ, ಜಯೇಶ್ ಗೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ ಮಲ್ಪೆ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
