ಹಿರಿಯಡಕ: ಜಾಗದ ತಕರಾರು-ಚೂರಿ ಇರಿತ , ದೂರು- ಪ್ರತಿದೂರು



ಹಿರಿಯಡಕ: ಜಾಗದ ತಕರಾರಿನಿಂದ ಪರಸ್ಪರ ಹಲ್ಲೆ ಮಾಡಿಕೊಂಡು ಚೂರಿಯಿಂದ ಇರಿದ ಘಟನೆ ಹಿರಿಯಡಕದ ಸಮೀಪದ ಪುತ್ತಿಗೆಯಲ್ಲಿ ನಡೆದಿದೆ.

ಸ್ಥಳೀಯ ಶಾರೀಕ್ ಮತ್ತು  ತಮೀಮ್ ಪರಸ್ಪರ ಹಲ್ಲೆ ಮಾಡಿಕೊಂಡವರು. ತಮೀಮ್ , ಶಾರೀಕ್‌ನ ಬೆನ್ನಿಗೆ ಮೂರು ಬಾರಿ ಇರಿದು ಕೊಲೆಗೆ ಪ್ರಯತ್ನಿಸಿದ್ದಾನೆ ಎಂದು ಮಹಮ್ಮದ್ ರಫೀಕ್ ಹಿರಿಯಡಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಘಟನೆ ವಿವರ: 

ರಫೀಕ್ ಪುತ್ತಿಗೆಯಲ್ಲಿರುವ ತನ್ನ ಸ್ವಂತ ಜಾಗದಲ್ಲಿ ಮನೆ ಕಟ್ಟಿಸಿದ್ದು ಪ್ರಸ್ತುತ ಆವರಣ ಗೋಡೆ ನಿರ್ಮಿಸುತ್ತಿದ್ದಾರೆ. ಸ್ಥಳೀಯರಾದ ಹುಸೇನ್ ಮತ್ತು ಮಗ ತಮೀಮ್ ಅಕ್ರಮ ಪ್ರವೇಶ ಮಾಡಿ ಆವರಣ ಗೋಡೆ ಕಟ್ಟದಂತೆ ಜೀವ ಬೆದರಿಕೆ ಹಾಕಿದ್ದರು. ಈ ಸಂದರ್ಭ ಅವರಿಬ್ಬರ ಪುತ್ರರ ನಡುವೆ ಹೊಯ್‌ಕೈ ನಡೆದಿದೆ.

ರಫೀಕ್ ಆವರಣ ಗೋಡೆ ನಿರ್ಮಿಸಲಾರಂಭಿಸಿದಾಗಲೇ ಹುಸೇನ್ ಆಕ್ಷೇಪಣೆ ಸಲ್ಲಿಸಿ ಸರ್ವೇ ಮಾಡಿಸಿದ್ದರು. ಆಗ ಜಾಗವು ಹುಸೇನ್‌ಗೆ ಸೇರಿದ್ದೆಂದು ತಿಳಿದುಬಂದ ಕಾರಣ ಅಲ್ಲಿ ನಿರ್ಮಾಣ ಕಾರ್ಯ ಮಾಡದಂತೆ ತಿಳಿಸಿದ್ದರು. ಆದರೂ ಕಾಮಗಾರಿ ಮುಂದುವರಿಸಿದಾಗ ನಾವು ವಿರೋಧಿಸಿದ್ದು, ಅಷ್ಟರಲ್ಲಿ ರಫೀಕ್ ಹಾಗೂ ಪುತ್ರ ಶಾರೀಕ್ ನಮ್ಮ ಮೇಲೆ ಸರಳಿನಿಂದ ಹಲ್ಲೆ ಮಾಡಿದ್ದಾರೆ. ತಲೆ ಮತ್ತು ಕೈಗೆ ಗಂಭೀರ ಏಟು ಬಿದ್ದಿದೆ ಎಂದು ರಫೀಕ್ ಪ್ರತಿದೂರು ನೀಡಿದ್ದಾರೆ.