ನವೆಂಬರ್ 30 : ಶಂಕರಪುರ ಸಾಯಿ ಮುಖ್ಯಪ್ರಾಣ ಕಾಲಭೈರವ ದೇವಸ್ಥಾನದಲ್ಲಿ ನಿಧಿ ಕುಂಭ ಪ್ರತಿಷ್ಠೆ

ಸುದ್ದಿಗೋಷ್ಟಿ

ಉಡುಪಿ: ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ಕಾಲಭೈರವ ದೇವಸ್ಥಾನ ಶಂಕರಪುರ  ಹಾಗೂ ಶ್ರೀ ಮುಖ್ಯಪ್ರಾಣ ಶಿಲಾಮೂರ್ತಿ ಪ್ರತಿಷ್ಠಾಪನಾ ಸಮಿತಿ ಇದರ ವತಿಯಿಂದ ಸಮಸ್ತ ಹಿಂದೂ ಬಾಂಧವರ ಒಗ್ಗಟ್ಟು ಹಾಗೂ ಏಳಿಗೆಯ ಮಹಾ ಸಂಕಲ್ಪದಲ್ಲಿ ಶ್ರೀ ಮುಖ್ಯಪ್ರಾಣ ದೇವರ 19 ಅಡಿ ಎತ್ತರದ ಏಕಶಿಲಾ ಮೂರ್ತಿ ಸ್ಥಾಪನೆಯು ಜರಗಲಿದೆ ಎಂದು ದ್ವಾರಕಾಮಾಯಿ ಮಠದ ಏಕಜಾತಿ ಧರ್ಮ ಪೀಠದ  ಶ್ರೀ ಸಾಯಿ ಈಶ್ವರ್ ಗುರೂಜಿ ಹೇಳಿದರು.

ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ,ಕಾರ್ಯಕ್ರಮ ಪ್ರಯುಕ್ತ ಪೂರ್ವಭಾವಿಯಾಗಿ  ನವೆಂಬರ್ 30ನೇ ಆದಿತ್ಯವಾರದಂದು ಬೆಳಿಗ್ಗೆ  10.30ಕ್ಕೆ ಸರಿಯಾಗಿ ಶ್ರೀ ಕ್ಷೇತ್ರದಲ್ಲಿ ಶಾಸ್ರೋಕ್ತವಾಗಿ ಶ್ರೀ ಮುಖ್ಯಪ್ರಾಣ ದೇವರ 19 ಅಡಿ ಎತ್ತರದ ಏಕಶಿಲಾ ಮೂರ್ತಿ ಸ್ಥಾಪನೆಗೆ ನಿಧಿ ಕುಂಭ ಪ್ರತಿಷ್ಠೆಯು ಜರಗಲಿದೆ ಎಂದರು.

ಈ ಧಾರ್ಮಿಕ ಪ್ರಕ್ರಿಯೆಯಲ್ಲಿ ದಿವ್ಯ ಸಾನಿಧ್ಯರಾಗಿ ಮಂಗಳೂರಿನ ಶ್ರೀ ಆದಿಶಕ್ತಿ ಭುವನೇಶ್ವರೀ ಆದಿನಾಥ ಸಿದ್ಧಿ ಪೀಠದ  ಶ್ರೀ ಪ್ರವೀಣ್ ರಾಜ್ ಮಚ್ಚೇಂದ್ರನಾಥ್ ಬಾಬಾ, ಮೈಸೂರು ಪರಮಹಂಸ ಗುರುದೇವ ಗುರುಮನೆ ಗೋಪಾಲಪುರ ಓಂ ಶಿವಾ ತಿರುಚಿಟ್ರಂಬಲಂ ಗುರುವೇ ಶರಣಂ ಅವಧೂತ ರಾಜಗುರು ವೇಲ್, ಶ್ರೀ ಮಹಾಲಕ್ಷ್ಮೀ ಕ್ಷೇತ್ರ ಮಾಣಿಲ ಶ್ರೀ ಮೋಹನ್‌ದಾಸ್ ಸ್ವಾಮೀಜಿ, ಕಿಷ್ಕಂದ ಹನುಮಬೆಟ್ಟ ಆಂಜನೇಯ ಜನ್ಮಸ್ಥಳ ಅಂಜನಾದ್ರಿಯ ಪ್ರಧಾನರಾದ ಮಹಾಂತ ವಿದ್ಯಾದಾಸ್ ಬಾಬಾ, ಕಿಷ್ಕಿಂದ ಬಾಲ ಆಂಜನೇಯ ದೇವಸ್ಥಾನದ ಮುಖ್ಯಸ್ಥರಾದ ಹನುಮಾನ್‌ ದಾಸ್ ತ್ಯಾಗಿ ಬಾಬಾ, ಟ್ರಸ್ಟಿಗಳಾದ  ವಿಶ್ವನಾಥ ಸುವರ್ಣ,  ಸ್ಮಿತಾ ಪ್ರವೀಣ್,  ಗೀತಾಂಜಲಿ ಎಂ. ಸುವರ್ಣ, ಅಧ್ಯಕ್ಷರಾದ  ಸುಧಾಕರ್ ಶೆಟ್ಟಿ, ಕಾರ್ಯದರ್ಶಿ ಸತೀಶ್ ದೇವಾಡಿಗ, ಪ್ರತಿಷ್ಠಾಪನಾ ಸಮಿತಿಯ ಗೌರವಾಧ್ಯಕ್ಷರುಗಳಾದ  ರಾಮ ಪೂಜಾರಿ,  ವೀಣಾ ಶೆಟ್ಟಿ, ಅಧ್ಯಕ್ಷರಾದ ಅಭಿರಾಜ್ ಎಂ. ಸುವರ್ಣ, ಕಾರ್ಯದರ್ಶಿ  ರಾಘವೇಂದ್ರ  ಸಹಿತ ಹಲವು ಗಣ್ಯರು ಪಾಲ್ಗೊಳ್ಳಲಿರುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಗೀತಾಂಜಲಿ ಎಂ. ಸುವರ್ಣ, ಸತೀಶ್ ದೇವಾಡಿಗ,   ರಾಮ ಪೂಜಾರಿ,  ವೀಣಾ ಶೆಟ್ಟಿ, ಅಧ್ಯಕ್ಷರಾದ ಅಭಿರಾಜ್ ಎಂ. ಸುವರ್ಣ ,ಅಖಿಲೇಶ್ ಕೋಟ್ಯಾನ್ ಮತ್ತಿತರರಿದ್ದರು.