![]() |
| ದುಬಾರಿ ತೆಂಗಿನಕಾಯಿ |
ಪರ್ಕಳ: ಪರ್ಕಳ ಸದಾ ಉಡುಪಿಯಲ್ಲಿ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ಸ್ಥಳ. ಸದ್ಯ ಇಲ್ಲಿನ ತೆಂಗಿನಕಾಯಿ ಕೂಡ ಸುದ್ದಿಯಲ್ಲಿದೆ. ಇಲ್ಲಿನ ಹೋಟೆಲ್ ಮಾಲಕರು ತರಕಾರಿ ಅಂಗಡಿಯೊಂದರಲ್ಲಿ ಖರೀದಿಸಿದ ತೆಂಗಿನ ಕಾಯಿಯ ಬೆಲೆ ಕೇಳಿ ಬೆಚ್ಚಿಬಿದ್ದಿದ್ದಾರೆ.ದೊಡ್ಡ ಗಾತ್ರದ ಈ ತೆಂಗಿನಕಾಯಿಯ ಬೆಲೆ ಬರೋಬ್ಬರಿ 105 ರೂ ! ಇದರ ತೂಕ ಒಂದು ಕೆ.ಜಿ 150 ಗ್ರಾಂ ಇದೆ. ಪರ್ಕಳದ ತೃಪ್ತಿ ಹೋಟೆಲ್ ಮಾಲಕರಾದ ಕರುಣಾಕರ್ ಶೆಟ್ಟಿ ಇದನ್ನು ಖರೀದಿಸಿದ್ದಾರೆ. ಇಷ್ಟೊಂದು ದರ ಏರಿಕೆಯ ಬಿಸಿಯಲ್ಲಿ ಹೋಟೆಲ್ ಉದ್ಯಮ ನಡೆಸುವುದು ಕಷ್ಟಕರ ಎಂದು ಅವರು ತಿಳಿಸಿದ್ದಾರೆ. ಅದಲ್ಲದೆ ಇಷ್ಟು ದೊಡ್ಡ ಗಾತ್ರದ ತೆಂಗಿನಕಾಯಿ ಸಿಗುವುದು ಕೂಡ ಅಪರೂಪ.
