![]() |
| ಸಿಎಂ ಡಿಸಿಎಂ ಬ್ರೇಕ್ ಫಾಸ್ಟ್ |
ಬೆಂಗಳೂರು: ಕಾಂಗ್ರೆಸ್ನಲ್ಲಿ ಬಿರುಗಾಳಿ ಎಬ್ಬಿಸಿರುವ ಪವರ್ ಶೇರಿಂಗ್ ಕಿತ್ತಾಟ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಹೈಕಮಾಂಡ್ ಮಾತಿನಂತೆ ನಡೆದುಕೊಳ್ಳೋದಾಗಿ ಹೇಳಿದ ಉಭಯ ನಾಯಕರು ಕೂಡ ಇದೀಗ ನೇರ-ನೇರ ಸಭೆ ನಡೆಸಿದ್ದಾರೆ. ಸಿಎಂ ಕಾವೇರಿ ನಿವಾಸದಲ್ಲಿ ನಡೆಯುತ್ತಿರುವ ಈ ಸಭೆ (Meeting) ಬಹಳ ಮಹತ್ವದ್ದಾಗಿದೆ. ಸಿಎಂ ಮನವೊಲಿಕೆ ಮಾಡ್ತಾರಾ ಡಿಕೆಶಿ ಎನ್ನುವ ಪ್ರಶ್ನೆ ಮೂಡಿದೆ. ಕಾವೇರಿ ನಿವಾಸಕ್ಕೆ ಆಗಮಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಸಿಎಂ ಸಿದ್ದರಾಮಯ್ಯ ಅವರು ನಗು ಮುಖದಲ್ಲೇ ಬರಮಾಡಿಕೊಂಡ್ರು. ಬಳಿಕ ಉಭಯ ನಾಯಕರು ಒಟ್ಟಿಗೆ ಬ್ರೇಕ್ಫಾಸ್ಟ್ ಸವಿದಿದ್ದಾರೆ. ಸಿಎಂ ಜೊತೆ ಮಾತಾಡ್ತಾ ಡಿಕೆಶಿ ಇಡ್ಲಿ, ಉಪ್ಪಿಟ್ಟು ಸವಿದ್ರು.
ಪ್ರತ್ಯೇಕ ಕೊಠಡಿಯಲ್ಲಿ ಮೀಟಿಂಗ್ ಸ್ಟಾರ್ಟ್
ಉಪಹಾರ ಸೇವಿಸಿದ ಬಳಿಕ ಸಿಎಂ ಹಾಗೂ ಡಿಸಿಎಂ ಪ್ರತ್ಯೇಕ ಕೊಠಡಿಗೆ ತೆರಳಿದ ಚರ್ಚೆ ಆರಂಭಿಸಿದ್ದಾರೆ. ಪವರ್ ಶೇರಿಂಗ್ ವಿಚಾರದ ಬಗ್ಗೆ ಅಂದು ನಡೆದ ಮಾತುಕತೆ ಹಾಗೂ ಇಂದಿನ ಬೆಳವಣಿಗೆಗಳ ಬಗ್ಗೆ ಇಬ್ಬರು ಚರ್ಚೆ ನಡೆಸುವ ಸಾಧ್ಯತೆ ಇದೆ.ಡಿಸಿಎಂ ಹಾಗೂ ಡಿಸಿಎಂ ಇಬ್ಬರು ಒಟ್ಟಿಗೆ ಬ್ರೇಕ್ಫಾಸ್ಟ್ ಮಾಡಿದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಒಗ್ಗಟ್ಟಾಗಿದ್ದೇವೆ ಎಂದು ಸಂದೇಶ ನೀಡುವ ಪ್ರಯತ್ನ ಮಾಡಿದ್ದಾರೆ.
ಮೀಟಿಂಗ್ ಬಳಿಕ ಸುದ್ದಿಗೋಷ್ಠಿ
ಸಿಎಂ-ಡಿಸಿಎಂ ಮೀಟಿಂಗ್ ಬಳಿಕ ಇಬ್ಬರು ನಾಯಕರು ಸುದ್ದಿಗೋಷ್ಠಿ ನಡೆಸಲಿದ್ದಾರೆ. ಹೈಕಮಾಂಡ್ ನಿರ್ಧಾರಕ್ಕೆ ಇಬ್ಬರು ನಾಯಕರು ಬದ್ದರಾಗಿದ್ದಾರೆ. ಮಾತುಕತೆಯಲ್ಲಿ ಉಭಯ ನಾಯಕರು ಒನ್ ಲೈನ್ ಅಜೆಂಡಾ ತೀರ್ಮಾನ ಹಾಗೂ ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗ್ತಿದೆ. ಕೆಲವೇ ಹೊತ್ತಿನಲ್ಲಿ ಸಿಎಂ ಡಿಸಿಎಂ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸುವ ಸಾಧ್ಯತೆ ಇದೆ.
