ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ: ನೂತನ ಅಧ್ಯಕ್ಷರಾಗಿ ಸುಜಿ ಕುರ್ಯ ಅವಿರೋಧ ಆಯ್ಕೆ

 

ಸುಜಿ ಕುರ್ಯ

ಉಡುಪಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ನ.9 ರಂದು ನಡೆಯಲಿದ್ದು, ಇದರ ಅಧ್ಯಕ್ಷ ಸ್ಥಾನಕ್ಕೆ ವಿಜಯ ಕರ್ನಾಟಕ ಜಿಲ್ಲಾ ವರದಿಗಾರ ಸುಬ್ರಹ್ಮಣ್ಯ ಭಟ್(ಸುಜಿ ಕುರ್ಯ) ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮೂರು ಉಪಾಧ್ಯಕ್ಷ ಸ್ಥಾನಕ್ಕೆ ಚಿತ್ತೂರು ಪ್ರಭಾಕರ್ ಆಚಾರ್ಯ, ಉದಯಕುಮಾರ್ ಹೆಬ್ರಿ, ಉದಯ್ ಕುಮಾರ್ ಶೆಟ್ಟಿ ಮುಂಡೂರು ನಾಮಪತ್ರ ಸಲ್ಲಿಸಿದ್ದಾರೆ.

ಒಂದು ರಾಜ್ಯ ಸಮಿತಿ ಸದಸ್ಯ ಸ್ಥಾನಕ್ಕೆ ಮೂವರು ನಾಮಪತ್ರ ಸಲ್ಲಿಸಿದ್ದು, ಇದಕ್ಕೆ ಚುನಾವಣೆ ನಡೆಯಲಿದೆ. ಬಾಲಕೃಷ್ಣ ಪೂಜಾರಿ ಉಚ್ಚಿಲ, ರಾಜೇಶ್ ಶೆಟ್ಟಿ ಅಲೆವೂರು, ಆಸ್ಟ್ರೋ ಮೋಹನ್ ಸ್ಪರ್ಧಿಸಿದ್ದಾರೆ.

ಮೂರು ಕಾರ್ಯದರ್ಶಿ ಸ್ಥಾನಕ್ಕೆ ಸುರೇಶ್ ಎರ್ಮಾಳ್, ಟಿ. ಲೋಕೇಶ್ ಆಚಾರ್ಯ, ಉಮೇಶ್ ಎಸ್ ಶೆಟ್ಟಿಗಾ‌ರ್ ಮಾರ್ಪಳ್ಳಿ ನಾಮಪತ್ರ ಸಲ್ಲಿಸಿದ್ದಾರೆ.

ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಹರೀಶ್ ಕುಂದರ್ ನಾಮಪತ್ರ ಸಲ್ಲಿಸಿದ್ದು ಬಹುತೇಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹದಿನೈದು ಮಂದಿಯ ಜಿಲ್ಲಾ ಕಾರ್ಯಕಾರಿ ಸಮಿತಿ ಹುದ್ದೆಗೆ ವಿಜಯ್ ಆಚಾರ್ಯ ಉಚ್ಚಿಲ, ಜನಾರ್ದನ್ ಕೊಡವೂರು, ಮೊಹಮ್ಮದ್ ಶರೀಫ್, ರಮಾನಂದ, ಸುಕುಮಾರ್ ಮುನಿಯಾಲ್, ಹೆಚ್ ಮೋಹನ್ ಉಡುಪ, ಪ್ರವೀಣ್ ಮುದ್ದೂರು, ಬಿ. ರಾಘವೇಂದ್ರ ಪೈ, ಕೆ.ಚಂದ್ರಶೇಖರ್, ಯೋಗೀಶ್ ವೆಂಕಟೇಶ್ ದೇವಾಡಿಗ, ಪ್ರಮೋದ್ ಸುವರ್ಣ, ಚೇತನ್ ಪೂಜಾರಿ, ಪ್ರಜ್ವಲ್ ನಾಮಪತ್ರ ಸಲ್ಲಿಸಿದ್ದು ಆಯ್ಕೆ ಬಹುತೇಕ ಖಚಿತವಾಗಿದೆ.