ಉಡುಪಿ: ಪ್ರಧಾನಿ ಮೋದಿ ಹುಟ್ಟು ಹಬ್ಬ: ಕಡಿಯಾಳಿಯ ಹೋಟೆಲ್ ಮಾಲಕ ನರಸಿಂಹ ಕಿಣಿ ಅವರಿಂದ ನಾಗರಿಕರಿಗೆ ಉಚಿತ ಹಾಲು ಪಾಯಸ ವಿತರಣೆ


 

ಉಡುಪಿ: ದೇಶದ ಪ್ರಧಾನ ಮಂತ್ರಿ ನರೇಂದ್ರ ದಾಮೋದರ್ ದಾಸ್ ಮೋದಿ ಇವರ 76 ನೇ ಹುಟ್ಟು ಹಬ್ಬವನ್ನು ಕಳೆದ ಹಲವಾರು ವರ್ಷಗಳಿಂದ  ಉಡುಪಿ ಕಡಿಯಾಳಿ ಹೋಟೆಲ್ ಶ್ರೀನಿವಾಸ್ ಮಾಲಕರಾದ ನರಸಿಂಹ ಕಿಣಿ ಇವರ ನೇತೃತ್ವದಲ್ಲಿ ನಾಗರಿಕರಿಗೆ ಉಚಿತ ಹಾಲು ಪಾಯಸ ನೀಡಲಾಯಿತು. ಇದರ ಉದ್ಘಾಟನೆಯನ್ನು ಯುವ ಉದ್ಯಮಿ ಜಯಂತ ಕುಂದರ್, ನೆರವೇರಿಸಿದರು.



ಕೆಡಿಯಾಳಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಸತೀಶ್ ಕುಲಾಲ್ ಕಡಿಯಾಳಿ,ಯುವ ಉದ್ಯಮಿ ಎಂ ವಲ್ಲಭ ಭಟ್, ಮಾಜಿ ನಗರ ಸಭಾ ಸದಸ್ಯ ಗಿರೀಶ್  ಅಂಚನ್, ಸಾಮಾಜಿಕ ಕಾರ್ಯಕರ್ತರಾದ ಸುವರ್ಧನ್ ನಾಯಕ್, ಮಂಜುನಾಥ್ ಹೆಬ್ಬಾರ್, ಸಂತೋಷ್ ಕಿಣಿ ,ಸಂಧ್ಯಾ ಪ್ರಭು ,ಶೋಭಾ ಕಾಮತ, ಸಂದೀಪ್ ಸನಿಲ್ , ಸತ್ಯಸಂಗಮ್ ಉಮೇಶ್ ಆಚಾರ್ಯ ಉಪಸ್ಥಿತರಿದ್ದರು,