ಉಡುಪಿ: 2000ನೇ ಸಾಲಿನಿಂದ ಪ್ರಾರಂಭದಲ್ಲಿ ವನಪಾಲಕರ ಸಂಘ / ಅರಣ್ಯಪಾಲಕರ ಸಂಘ ತದನಂತರ ಉಪವಲಯ ಅರಣ್ಯ ಅಧಿಖಾರಿಯವರ ಸಂಘ ಎಂಬ ನಾಮಾಂಕಿತದಿಂದ ಇಲಾಖಾ ಕರ್ತವ್ಯದೊಂದಿಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುತ್ತದೆ.
ನಮ್ಮ ಸಂಘದ ಕಾರ್ಯಕ್ರಮಗಳಲ್ಲಿ ಅತೀ ಶ್ರೇಷ್ಠ ಕಾರ್ಯಕ್ರಮವು 'ರಕ್ತದಾನ ಶಿಬಿರ' ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಪ್ರತೀ ವರ್ಷ ನೂರಾರು ಯೂನಿಟ್ ರಕ್ತದಾನವನ್ನು 'ಅರಣ್ಯ ಹುತಾತ್ಮರ ದಿನ' ಅಂಗವಾಗಿ ನಮ್ಮ ಉಡುಪಿ ಜಿಲ್ಲೆಯ ಉಡುಪಿ ಅಜ್ಜರಕಾಡು, ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ಕೇಂದ್ರಕ್ಕೆ ಸದ್ರಿ ರಕ್ತ ನಿಧಿಯವರ ಸಹಕಾರದಿಂದ ಅರಣ್ಯ ಇಲಾಖೆ ಮತ್ತು ಸಾರ್ವಜನಿಕರೊಂದಿಗೆ ನೀಡುತ್ತ ಬಂದಿರುತ್ತೇವೆ. ಈ ಉತ್ತಮ ರಕ್ತದಾನ ಶಿಬಿರವನ್ನು ಕಳೆದ 5 ವರ್ಷಗಳಿಂದ ನಮ್ಮ ಗಸ್ತು ಅರಣ್ಯ ಪಾಲಕರು ಮತ್ತು ಅರಣ್ಯ ವೀಕ್ಷಕರ ಸಂಘ (ರಿ.) ಉಡುಪಿ ಜಿಲ್ಲೆ ಇವರೊಂದಿಗೆ ಜಂಟಿಯಾಗಿ ರಕ್ತದಾನ ಶಿಬಿರವನ್ನು ಮಾಡಿಕೊಂಡು ಬರುತ್ತಾ ಇದ್ದೇವೆ. ಇದರಲ್ಲಿ ಕೂಡ ನಾವು ಯಶಸ್ಸು ಕಂಡಿದ್ದೇವೆ. ಈ ಸಂಘಟನೆಯ ಅತ್ಯುತ್ತಮ ಕಾರ್ಯಕ್ರಮಕ್ಕೆ ನಮ್ಮ ಎಲ್ಲಾ DCF/ACF/RFO ರವರು ತಮ್ಮ ಎಲ್ಲಾ ಸಿಬ್ಬಂದಿಯವರನ್ನು ಕೂಡಿಕೊಂಡು ಇಲಾಖಾ ವಾಹನದಲ್ಲಿ ಬಂದು ರಕ್ತದಾನ ಮಾಡಿ ಈ ಪುಣ್ಯದ ಕಾರ್ಯಕ್ರಮದಲ್ಲಿ ಭಾಗಿ ಆಗಿರುತ್ತಾರೆ. ಅದೇ ರೀತಿಯಲ್ಲಿ ನಮ್ಮ ಇಲಾಖೆಯಲ್ಲಿ ಯಾರಿಗಾದ್ರು ರಕ್ತದ ಅವಶ್ಯಕತೆ ಇದ್ದಾಗ ನಮ್ಮ ಸಂಘಟನೆಯಿಂದ ಸದ್ರಿ ರಕ್ತನಿಧಿಕೇಂದ್ರದಿಂದ ರಕ್ತವನ್ನು ಪೂರೈಸುವ ಜವಬ್ದಾರಿಯನ್ನು ಕೂಡ ನಿಭಾಯಿಸಿರುತ್ತೇವೆ. 2025ರ ಸಂಘದ ರಜತ ಸಂಭ್ರಮ ಸಾಲಿನಲ್ಲಿ ನಮ್ಮ ಎಲ್ಲಾ ಇಲಾಖಾ ಅಧಿಕಾರಿಯವರು ಈ ಅರಣ್ಯ ಹುತಾತ್ಮರ ಕಾರ್ಯಕ್ರಮ ಇನ್ನೂ ಚೆನ್ನಾಗಿ ಮೂಡಿ ಬರಬೇಕೆನ್ನುವ ಆಶೆಯಿಂದ ಅದರಲ್ಲೂ ನಮ್ಮ ಹಿಂದಿನ DCF ಅವರು ಸ್ಪಷ್ಟ ಸೂಚನೆ ಪ್ರತೀ ವಲಯವಾರು ವಲಯ ಅರಣ್ಯ ಅಧಿಕಾರಿಯವರಿಗೆ ಹಾಗೂ ಮಾನ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ರಕ್ತದಾನ ಶಿಬಿರದ ಮಾಹಿತಿ ನೀಡಿ ತಮ್ಮ ಸಿಬ್ಬಂದಿ, ಕಛೇರಿ ಸಿಬ್ಬಂದಿ ಹಾಗೂ ದಿನಗೂಲಿ ನೌಕರರರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿ ಆಗುವಂತೆ ನೋಡಿಕೊಂಡಿದ್ದಾರೆ. ಆ ಪ್ರಯುಕ್ತ 2025ರ ಸಾಲಿನಲ್ಲಿ 155 ಯೂನಿಟ್ ರಕ್ತದಾನ ಮಾಡಿ ಉಡುಪಿ ಜಿಲ್ಲೆಯ ಸಂಘಟನೆಗಳಲ್ಲಿ ಅರಣ್ಯ ಇಲಾಖೆಯು ಅತೀ ದೊಡ್ಡ ರಕ್ತದಾನ ಶಿಬಿರ ಎಂಬ ಹೆಗ್ಗಳಿಕೆ ಪಾತ್ರವಾಗಿರುತ್ತದೆ.
ದಿನಾಂಕ 11-09-2026ರ ರಕ್ತದಾನ ಶಿಬಿರದಲ್ಲಿ ಸುಮಾರು 200 ಯೂನಿಟ್ ರಕ್ತದಾನ ಮಾಡುವ ಗುರಿಯನ್ನು ಹೊಂದಿರುತ್ತೇವೆ. ತಾವುಗಳು ಈ ಪುಣ್ಯದ ಕಾರ್ಯಕ್ರಮದಲ್ಲಿ ರಕ್ತದಾನ ಮಾಡಿ ರಕ್ತದಾನದಿಂದ ಆಗುವ ಪ್ರಯೋಜನಕ್ಕೆ ತಾವು ಭಾಜನ ಆಗಬೇಕು ಎಂದು ನಿರೀಕ್ಷೆಯಲ್ಲಿದ್ದೇವೆ.ಈ ರಕ್ತದಾನ ಶಿಬಿರದಲ್ಲಿ Health check up ( Bp, sugar, e c g ಮತ್ತು ಪ್ರಸಾದ್ ನೇತ್ರಾಲಯದಿಂದ eye check up) ಕೂಡ ಇದೆ. ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಕೋರಿಕೆ.

