CJP ಇಬ್ಭಾಗ: ಹೊಸ ಬಣ ಘೋಷಿಸಿದ ಬ್ರಹ್ಮಭಟ್

 


ಹೊಸದಿಲ್ಲಿ: ಅಭಿಜಿತ್‌ ದೀಪ್ಕೆ ನೇತೃತ್ವದ ಕಾಕ್ರೋಚ್  ಜನತಾ ಪಾರ್ಟಿಯಲ್ಲಿ (ಸಿಜೆಪಿ) ಭಿನ್ನಮತ ಸ್ಫೋಟಗೊಂಡಿದ್ದು, ದಿಲ್ಲಿಯ ಜಂತರ್‌ಮಂತರ್ ಪ್ರತಿಭಟನೆ ವೇಳೆ ಸ್ವಯಂ ಸೇವಕರಾಗಿ ಕೆಲಸ ಮಾಡಿದ್ದ ಮನಿಷ್ ಬ್ರಹ್ಮಭಟ್ ಇದೀಗ ತಮ್ಮದೇ ಆದ ಕಾಕ್ರೋಚ್ ಜನತಾ ಪಾರ್ಟಿ-ಡೆಮಾಕ್ರಟಿಕ್ ಪಕ್ಷ (ಸಿಜೆಪಿ-ಡಿ) ಆರಂಭಿಸಿದ್ದಾರೆ. ಈ ವೇಳೆ ಆಪ್‌ ಜತೆಗೂಡಿ ದೀಪ್ಕೆ ಕೆಲಸ ಮಾಡುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ. ಈ ಹೊಸ ವೇದಿಕೆಯು ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಪ್ರಜಾಸತ್ತಾತ್ಮಕ ನಿರ್ಧಾರಗಳನ್ನು ಕೈಗೊಳ್ಳುವುದರ ಮೇಲೆ ಗಮನ ಹರಿಸಲಿದೆ. ಸಾಮಾಜಿಕ ಜಾಲತಾಣಗಳ ಖಾತೆಗಳು, ವಾಟ್ಸ್‌ಆ್ಯಪ್ ಮತ್ತು ಮಿಸ್ ಕಾಲ್ ನೀಡುವ ಮೂಲಕ ಹೊಸ ವೇದಿಕೆಯನ್ನು ಸೇರಬಹುದು ಎಂದು ಬ್ರಹ್ಮಭಟ್ ತಿಳಿಸಿದ್ದಾರೆ.