ಮುದ್ರಾಡಿ : ಶ್ರೀ ಕ್ಷೇತ್ರ ಮುದ್ರಾಡಿ ಅಭಯಹಸ್ತೆ ಶ್ರೀ ಆದಿಶಕ್ತಿ ಮತ್ತು ನಂದಿಕೇಶ್ವರ ದೇವಸ್ಥಾನದಲ್ಲಿ ಜುಲೈ 26ರಂದು ಮುದ್ರಾಡಿ ಶ್ರೀ ಆದಿಶಕ್ತಿ ಕ್ಷೇತ್ರವನ್ನು ಬೆಳಗಿಸಿದ ಧರ್ಮಯೋಗಿ ಮೋಹನ ಸ್ವಾಮೀಜಿಯವರ 5ನೇ ವರ್ಷದ ಆರಾಧನಾ ಮಹೋತ್ಸವದಲ್ಲಿ ನೀಡುವ “ಧರ್ಮಯೋಗಿ ಸನ್ಮಾನ” ಪುರಸ್ಕಾರಕ್ಕೆ ಉಡುಪಿ ಜಿಲ್ಲೆಯ ಪ್ರಖ್ಯಾತ ಯುವ ಉದ್ಯಮಿ ಮಂದಾರ್ತಿ ಸಂಪತ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕ್ಷೇತ್ರದ ಧರ್ಮಾಧಿಕಾರಿ ಧರ್ಮಯೋಗಿ ಸುಕುಮಾರ್ ಮೋಹನ್ ತಿಳಿಸಿದ್ದಾರೆ.ಅವರು ಜುಲೈ 23ರ ಗುರುವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಎಲ್ಲರ ಗಮನ ಕುಂದಾಪುರದತ್ತ…
ಕರಾವಳಿಯ ಯಶಸ್ವಿ ಯುವ ಉದ್ಯಮಿ ಭಾರತದಲ್ಲಿ ಅತಿ ದೊಡ್ಡ ಕ್ಯಾಶ್ಯೂ ಇಂಡಸ್ಟ್ರೀಸ್ ತನ್ನ ಊರಿನಲ್ಲಿ ಸ್ಥಾಪಿಸುವ ಮೂಲಕ ಇಡೀ ವಿಶ್ವದ ಗೋಡಂಬಿ ಉದ್ಯಮ ಕ್ಷೇತ್ರ ಕುಂದಾಪುರ ದತ್ತ ಗಮನಿಸುವಂತೆ ಮಾಡಿರುವ ಸಾಹಸಿ ಸಂಪತ್ ಶೆಟ್ಟಿ ಅವರು.
ಉದ್ಯೋಗ ಅರಸಿ ಬೆಂಗಳೂರಿಗೆ….
ಮಂದಾತಿಯ ಶೀರೂರು ಶೇಖರ್ ಶೆಟ್ಟಿ, ಹಲ್ನಾಡ್ ನಯನ ಶೆಟ್ಟಿ ದಂಪತಿಯ ಪುತ್ರನಾದ ಸಂಪತ್ ಶೆಟ್ಟಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಶಿರೂರು ಮುದ್ದುಮನೆಯಲ್ಲಿ, ಪ್ರೌಢ ಮತ್ತು ಪದವಿ ಪೂವ ಶಿಕ್ಷಣವನ್ನು ಮಂದಾರ್ತಿಯಲ್ಲಿ ಪಡೆದು, ಮುರುಡೇಶ್ವರದ ಆರ್ ಎನ್ ಶೆಟ್ಟಿ ಪಾಲಿಟೆಕ್ನಿಕ್ ವಿದ್ಯಾ ಸಂಸ್ಥೆಯಲ್ಲಿ ಯಾಂತ್ರಿಕ ಇಂಜಿನಿಯರ್ ಡಿಪ್ಲೋಮಾ ಪೂರೈಸಿದ್ದಾರೆ. ತಮ್ಮ ವೃತ್ತಿ ಜೀವನವನ್ನು ಉಡುಪಿಯ ಕಾಂಚನ ಹೊಂಡಾಯ್ ನಲ್ಲಿ ಆರಂಭಿಸಿ ಒಂದು ವರ್ಷ ಸರ್ವಿಸ್ ಅಡ್ವೈಸರ್ ಆಗಿ, ನಂತರ ಮಂಗಳೂರಿನ ಸನ್ ಟೆಕ್ಸ್ ಫ್ಯಾಬ್ರೀಕೇಷನ್ ಕಂಪನಿಯಲ್ಲಿ ಒಂದು ವರ್ಷ ಕಾಲ ಹಾಗೂ ಅವರಸಲ ಟೆಕ್ನಾಲಜಿ ಬೆಂಗಳೂರು ನಲ್ಲಿ ಒಂದುವರೆ ವಷಗಳ ಕಾಲ ಅಪ್ಲಿಕೇಶನ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಉದ್ಯಮಿಯಾಗುವ ಕನಸು ಕಂಡವರು ಸಂಪತ್ ಶೆಟ್ಟಿ…
ಉದ್ಯಮಿಯಾಗುವ ಕನಸು ಕಂಡು ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಂದ ಪಡೆದ 2 ಲಕ್ಷ ರೂಪಾಯಿ ಧನ ಸಹಾಯ ಮತ್ತು ಶುಭ ಹಾರೈಕೆ,ಸಹೋದರಿ ಶ್ರುತಿ ಜೆ ಶೆಟ್ಟಿ ಮತ್ತು ಭಾವ ಜಯಪ್ರಕಾಶ್ ಶೆಟ್ಟಿ ಅವರ ಬೆಂಬಲದೊಂದಿಗೆ, ಗೇರು ಉದ್ಯಮದ ಅನುಭವಿಗಳಾಗಿದ್ದ ಶಶಿಧರ್ ಶೆಟ್ಟಿ, ಶಂಕರ ಹೆಗಡೆ ಮತ್ತು ನಾಗರಾಜ್ ಶೆಟ್ಟಿ ಅವರ ಮಾರ್ಗದರ್ಶನ ಪಡೆದು 2012ರಲ್ಲಿ ಮಂದಾರ್ತಿ ಸಮೀಪದ ವಂಡಾರಿನಲ್ಲಿ ಶ್ರೀ ಕೃಷ್ಣಪ್ರಸಾದ್ ಕ್ಯಾಶ್ಯೂ ಪ್ರಾರಂಭಿಸಿದರು.
ಉದ್ಯಮ ಆರಂಭ…!
ಪ್ರತಿದಿನ ಕೇವಲ 10 ಗೋಣಿ ಅಂದರೆ ಸರಿ ಸುಮಾರು 750 ಕೆಜಿ ಗೇರು ಸಂಸ್ಕರಣಾ ಘಟಕವನ್ನು 10 ಮಂದಿ ಉದ್ಯೋಗಿಗಳಿಂದ ಆರಂಭಿಸಿ, ದಿನದ 16 ಗಂಟೆಗಳ ಕಾಲ ಹಗಲು ರಾತ್ರಿ ಎನ್ನದೆ ಕಷ್ಟ ನಷ್ಟಗಳಿಗೆ ಧೃತಿಗೆಡದೆ ಆತ್ಮ ವಿಶ್ವಾಸದಿಂದ ಉದ್ಯಮ ಆರಂಬಿಸಿದ್ದರು.
ಅನೇಕ ಏರಿಳಿತದ ನಡುವೆ ಅವರ ಕಠಿಣ ಪರಿಶ್ರಮದಿಂದ ಹಂತ ಹಂತವಾಗಿ ಅಭಿವೃದಿ ಕಂಡ ಉದ್ಯಮ 5 ಕೋಟಿ ವ್ಯವಹಾರದಿಂದ 20 ಕೋಟಿಗೆ ಏರಿಕೆಯಾಯಿತು. ಬ್ಯಾಂಕ್ ಗಳ ನೆರವಿನೊಂದಿಗೆ ದೂರದ ಆಫ್ರಿಕಾ ದೇಶಗಳಿಂದ ನೇರವಾಗಿ ಕಚ್ಚಾ ಗೋಡಂಬಿಯನ್ನು ಆಮದು ಮಾಡಿಕೊಳ್ಳುವುದರೊಂದಿಗೆ, ಬೇಡಿಕೆಗೆ ತಕ್ಕಂತೆ ಅತ್ಯಾಧುಧುನಿಕ ಯಂತ್ರೋಪಕರಣಗಳನ್ನು ವಿದೇಶದಿಂದ ಆಮದು ಮಾಡಿಕೊಂಡು ಕೇವಲ 1 ಟನ್ ನಿಂದ ಆರಂಭವಾದ ಸಂಸ್ಕರಣೆಯನ್ನು 150 ಟನ್ ಸಂಸ್ಕರಣೆ ಮಾಡುವ ಸಾಮಥ್ಯ ದ ಹಂತಕ್ಕೆ ತಲುಪಿಸುವಂತಾದರು.
ಅಭಿವೃದ್ಧಿಯ ಪಥ ಆರಂಭ….. ಟ್ರೇಡಿಂಗ್ ಕ್ಷೇತ್ರಕ್ಕೆ ಎಂಟ್ರಿ….
ಅತಿ ಕಡಿಮೆ ಬಂಡವಾಳದಿಂದ ಆರಂಭವಾದ ಸಂಸಂಸ್ಥೆ 2024ರಲ್ಲಿ ಶ್ರೀ ಕೃಷ್ಣ ಪ್ರಸಾದ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಾಯಿತು. ಗುಣಮಟ್ಟದ ಉತ್ಪನ್ನಗಳೊಂದಿಗೆ ಜಾಗತಿಕ ಶ್ರೇಷ್ಠತೆಯನ್ನು ಸಾಧಿಸುವ ನಿಟ್ಟಿನಲ್ಲಿ ಟ್ರೇಡಿಂಗ್ ಉದ್ಯಮ ಪ್ರವೇಶಿಸಿ 2020ರಲ್ಲಿ ವಂಡಾರಿನಲ್ಲಿ ಅಭಿಮನ್ಯು ಎಂಪೋರ್ಟ್ ಹಾಗೂ ಎಕ್ಸ್ ಪೋರ್ಟ್ ಸಂಸ್ಥೆ, 2021 ರಲ್ಲಿ ಶ್ರೀ ಕೃಷ್ಣಾನುಗ್ರಹ ಪ್ರೈವೇಟ್ ಲಿಮಿಟೆಡ್, 2024ರಲ್ಲಿ ಶ್ರೀ ಕೃಷ್ಣಪ್ರಸಾದ್ ಆಗ್ರೋ ಪ್ರೈವೇಟ್ ಲಿಮಿಟೆಡ್, ಮತ್ತು ಶ್ರೀ ಕೃಷ್ಣ ಪ್ರಸಾದ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್, 2025 ರಲ್ಲಿ ಶ್ರೀ ಕೃಷ್ಣ ಪ್ರಸಾದ್ ಸ್ಟೀಲ್ ಪ್ರೈವೇಟ್ ಲಿಮಿಟೆಡ್, 2026ರಲ್ಲಿ ದೇಶದಲ್ಲೇ ಅತಿ ದೊಡ್ಡ ಗೇರು ಸಂಸ್ಕರಣ ಘಟಕವನ್ನು ವಂಡಾರಿನ ಬೋಡ್ಕಲ್ ನಲ್ಲಿ ಸ್ಥಾಪಿಸಿ ಕರಾವಳಿ ಜಿಲೆಯ ಉದ್ಯಮ ಕ್ಷೇತ್ರಕ್ಕೆ ಸಂಪತ್ ಶೆಟ್ಟಿಯವರು ಬಹುದೊಡ್ಡ ಕೊಡುಗೆಯನ್ನು ಮಹತ್ವದ ಸಾಧನೆ ಮಾಡಿದ್ದಾರೆ.
ಸಮಾಜದಿಂದ ಪಡೆದದ್ದು ಸಮಾಜಕ್ಕೆ…
ಶ್ರೀ ಕೃಷ್ಣ ಪ್ರಸಾದ್ ಫೌಂಡೇಶನ್ ಸ್ಥಾಪನೆ
ಸಮಾಜದಿಂದ ಪಡೆದದ್ದನ್ನು ಸಮಾಜಕ್ಕಾಗಿ ನೀಡುವೆ ಎಂಬ ಸಂಪತ್ ಶೆಟ್ಟಿ ಅವರ ಧ್ಯೇಯದೊಂದಿಗೆ 2025 ರಲ್ಲಿ ಸಂಸ್ಥೆಯಿಂದ ಆರಂಭಿಸಲ್ಪಟ್ಟ ಶ್ರೀ ಕೃಷ್ಣ ಪ್ರಸಾದ್ ಫೌಂಡೇಶನ್ ಗ್ರಾಮೀಣ ಶಿಕ್ಷಣ, ಆರೋಗ್ಯ ರಕ್ಷಣಾ ಬೆಂಬಲ, ನಶಿಸಿ ಹೋಗುತ್ತಿರುವ ಉಡುಪಿ ಜಿಲೆಯ ಗ್ರಾಮೀಣ ಕಲೆಗಳನ್ನು ಉಳಿಸಿ ಬೆಳೆಸುವ ದಾರಿಯತ್ತ ದಾಪುಗಾಲ ಇಡುತ್ತಿದೆ. ಏಕ ಪೋಷಕಾ ಅಥವಾ ಅನಾಥ ಮಕ್ಕಳ ಶಿಕ್ಷಣದ ಪೂರ್ಣ ವೆಚ್ಚವನ್ನು , ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳ ಸಂಪೂಣ ವೆಚ್ಚವನ್ನು ಫೌಂಡೇಶನ್ ಬರಿಸುತ್ತಿದೆ. ವಾರ್ಷಿಕವಾಗಿ ಸುಮಾರು 1 ಕೋಟಿ ರೂ ಹಣವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುವ ಉದ್ದೇಶ ಶ್ರೀ ಕೃಷ್ಣಪ್ರಸಾದ್ ಫೌಂಡೇಶನ್ ಹೊಂದಿದ್ದು ಸೇವೆಯಲ್ಲಿ ನಿರತವಾಗಿದೆ.
ಭವಿಷ್ಯದ ಕನಸು…. 8 ಸಾವಿರ ಮಂದಿಗೆ ಉದ್ಯೋಗ ….
1000 ಸಾವಿರ ಕೋಟಿ ವಾರ್ಷಿಕ ವ್ಯವಹಾರದ ಗುರಿಯನ್ನು ಹೊಂದಿರುವ ಶ್ರೀಕೃಷ್ಣ ಪ್ರಸಾದ್ ಸಮೂಹ ಸಂಸ್ಥೆಗಳು ಈಗಾಗಲೇ 3500 ಮಂದಿಗೆ ಉದ್ಯೋಗ ಮತ್ತು ಬದುಕು ನೀಡಿದೆ. ಮುಂದಿನ ದಿನಗಳಲ್ಲಿ 8000 ಮಂದಿಗೆ ಉದ್ಯೋಗ ನೀಡುವ ಆಶಯವನ್ನು ಸಂಸ್ಥೆಯು ಹೊಂದಿದೆ. ಉಡುಪಿ ಜಿಲ್ಲೆಯ ವಿದ್ಯಾವಂತ ಯುವಕರು ಉದ್ಯೋಗ ಅರಸಿ ಬೆಂಗಳೂರಿಗೆ ಹೋಗುವ ಬದಲು ಊರಿನಲಿ ಉದ್ಯೋಗ ಹೊಂದುವಂತಾಗಬೇಕೆಂಬ ಹಂಬಲ ಸಂಪತ್ ಶೆಟ್ಟಿ ಅವರದು.
ಮೂರು ದೊಡ್ಡ ಘಟಕಗಳ ಜೊತೆಗೆ ಸಮಾಜಮುಖಿ ಯುವ ಉದ್ಯಮಿಯಾಗಿ ಬೆಳೆಯುತ್ತಿರುವ ಸಂಪತ್ ಶೆಟ್ಟಿ ಅವರಿಗೆ ವಿಜಯವಾಣಿ ಪತ್ರಿಕೆ ಕೊಡಮಾಡಿದ “ವಿಜಯ ರತ್ನ ಇಂಟನ್ಯಾಶನಲ್ ಅವಾರ್ಡ್ ದುಬೈ 2026 ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಸಂಪತ್ ಕುಮಾರ್ ಶೆಟ್ಟಿ ಅವರನ್ನು ಗೌರವಿಸಿದೆ.
ನಿದೇಶಕ ಮಂಡಳಿಯ ಮುಖ್ಯಸ್ಥರಾದ ಪತ್ನಿ ಸೋನಾಲಿ ಶೆಟ್ಟಿ ಮತ್ತು ಮತ್ತು ಮಗಳು ಆಧ್ಯಾ ಶೆಟ್ಟಿ ಅವರ ಪ್ರೇರಣೆಯೊಂದಿಗೆ ಉದ್ಯಮ ಕ್ಷೇತ್ರದ ಪಯಣ ಸ್ಪೂರ್ಥಿದಾಯಕವಾಗಿ ಮುನ್ನಡೆಯುತ್ತಿದೆ. ಸಂಪತ್ ಶೆಟ್ಟಿ ಅವರ ಸಮರ್ಪಣಾಭಾವ ಮತ್ತು ದೂರ ದೃಷ್ಠಿಗೆ ಗ್ರಾಮೀಣ ಪ್ರದೇಶದ ಉದ್ಯಮ ಸಮೂಹ ಸಾಕ್ಷಿಯಾಗಿದೆ.ಸಾವಿರಾರು ಯುವ ಸಮುದಾಯಕ್ಕೆ ಮತ್ತು ಯುವ ಉದ್ಯಮಿಗಳಿಗೆ ಪ್ರೇರಣೆಯಾಗಿದೆ.
ಮುದ್ರಾಡಿ ಆದಿಶಕ್ತಿ ದೇವಸ್ಥಾನದಲ್ಲಿ ಕಾರ್ಕಳ ಶಾಸಕ ಸುನೀಲ್ ಕುಮಾರ್ ಪ್ರಶಸ್ತಿ ಪ್ರಧಾನ ಮಾಡುವರು. ಕಾರ್ಕಳದ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಮುದ್ರಾಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗಣಪತಿ ಎಂ ಮುದ್ರಾಡಿ ಉಪಸ್ಥಿತರುವರು.

