ಉಡುಪಿ: ದಸಂಸ ಸಂಸ್ಥಾಪಕ , ಚಳುವಳಿಯ ಕಿಚ್ಚು ಹಚ್ಚಿದ ಪ್ರೊ. ಬಿ. ಕೃಷ್ಣಪ್ಪನವರ ಜನ್ಮ ಜಯಂತಿ ಆಚರಣೆ

 


ಉಡುಪಿ: ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಮುಂದಿನ ಬಾಬಾ ಸಾಹೇಬರ ಪ್ರತಿಮೆ ಎದುರು ಇಂದು ದಸಂಸ ಸಂಸ್ಥಾಪಕರಾದ ಪ್ರೊ. ಬಿ. ಕ್ರಷ್ಣಪ್ಪನವರ ಜನ್ಮ ಜಯಂತಿಯನ್ನು ಆಚರಿಸಲಾಯಿತು.

ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಬಾಬಾ ಸಾಹೇಬ್ ಅಂಬೇಡ್ಕರ್ ರ ಪ್ರತಿಮೆ ಮತ್ತು ಕೃಷ್ಣಪ್ಪ ನವರ ಭಾವ ಚಿತ್ರಕ್ಕೆ ಹೂಮಾಲೆ ಹಾಕಿ ಗೌರವ ಸಲ್ಲಿಸಿ, ಪ್ರೊ. ಬಿ. ಕೆ. ಯವರ ಜೀವನ-ಸಾಧನೆ ಬಗ್ಗೆ ತಿಳಿಸಿದರು. ಅಲ್ಲದೆ ಕೃಷ್ಣಪ್ಪ ನವರು ತೋರಿದ ಮಾರ್ಗದಲ್ಲಿ ನಾವೆಲ್ಲಾ ನಡೆಯಬೇಕು ಎಂದು ಹೇಳಿದರು.



ವಿಭಾಗೀಯ ಸಂಘಟನಾ ಸಂಚಾಲಕ ಶಾಮ ರಾಜ್ ಬಿರ್ತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿದ್ದರು. ಅವರು ಪ್ರೊ. ಬಿ. ಕೆ. ಯವರು ಉಡುಪಿ ಜಿಲ್ಲೆಯೊಂದಿಗೆ ಹೊಂದಿದ್ದ ಭಾವನಾತ್ಮಕ ಸಂಬಂಧದ ಬಗ್ಗೆ ಮಾತಾಡಿದರು.

ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು, ಜಿಲ್ಲಾ ಸಂಘಟನಾ ಸಂಚಾಲಕರಾದ ಮಂಜುನಾಥ ನಾಗೂರು, ಸುರೇಶ್ ಹಕ್ಲಾಡಿ, ಭಾಸ್ಕರ್ ನಿಟ್ಟೂರು, ಜಿಲ್ಲಾ ಮಹಿಳಾ ಒಕ್ಕೂಟದ ಗೀತಾ ಸುರೇಶ್, ವಿನಯ ಮಾಸ್ತಿಕಟ್ಟೆ, ತಾಲೂಕು ಸಂಚಾಲಕರಾದ ಶಾಮ್ ಸುಂದರ್ ತೆಕ್ಕಟ್ಟೆ, ಕೆ. ಸಿ. ರಾಜು. ಬೆಟ್ಟಿನ ಮನೆ, ಶಿವರಾಜ್ ಬೈಂದೂರ್, ಜಿಲ್ಲಾ ಸಮಿತಿಯ ಸುರೇಶ್ ಬಾರ್ಕುರ್, ಕುಮಾರ್ ಕೋಟ,ಹರೀಶ್ಚಂದ್ರ ಕೆ. ಡಿ. ಪ್ರವೀಣ್ ಗುಂಡಿಬೈಲು, ಗುಣವಂತ ಬೈರಂಪಳ್ಳಿ, ಮುದ್ದಣ್ಣ, ಕ್ರಷ್ಣ ಬೆಳ್ಳೆ, ಹರೀಶ್ ಕಲ್ಯಾ,ರಮೇಶ್ ಉಪಸ್ಥಿತರಿದ್ದರು.ಪ್ರಶಾಂತ್ ಬಿರ್ತಿ ಹೋರಾಟದ ಹಾಡು ಹಾಡಿದರು.