ಉಡುಪಿ: ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಸಿಪಿಐಎಂ ನೇತ್ರತ್ವದಲ್ಲಿ ಇಂದು ಖಾಸಗಿ ಬಸ್ ದರ ಮತ್ತು ಗ್ಯಾಸ್ ದರ ಹೆಚ್ಚಳ ವಿರೋಧಿಸಿ ಮಣಿಪಾಲದ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಬಳಿಕ ಅಪಾರ ಜಿಲ್ಲಾಧಿಕಾರಿ ಯವರಿಗೆ ಮನವಿ ನೀಡಿ ಚರ್ಚಿಸಲಾಯಿತು.
ಪ್ರತಿಭಟನೆಯಲ್ಲಿ ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ್,ಕಾರ್ಯದರ್ಶಿ ಮಂಡಳಿ ಸದಸ್ಯರಾದ ಚಂದ್ರಶೇಖರ್. ವಿ.,ಎಚ್ ನರಸಿಂಹ, ರಾಜು ಪಡುಕೋಣೆ ಜಿಲ್ಲಾ ಸಮಿತಿ ಸದಸ್ಯರಾದ ಪ್ರಭಾಕರ್ ಕುಂದರ್ ,ಉಮೇಶ್ ಕುಂದರ್,ಸುಭಾಸ್ ನಾಯಕ್,ಬಲ್ಕೀಸ್ ಸಿಪಿಐಎಂ ಪಕ್ಷ ದ ಉಡುಪಿ ವಲಯ ಕಾರ್ಯದರ್ಶಿ ಶಶಿಧರ್ ಗೊಲ್ಲ ಸದಸ್ಯರಾದ ಮಹಾಬಲ ಒಡೆಯರಹೋಬಳಿ,ನಳಿನಿ,ಶೀಲಾವತಿ,ಚಿಕ್ಕ ಮೊಗವೀರ,ನಾಗೇಶ್, ಸಿಐಟಿಯು ಮುಖಂಡರಾದ ಸುರೇಂದ್ರ, ಸುನೀತಾ ಶೆಟ್ಟಿ, ನಾಗರತ್ನ ಪಡುವರಿ,ಜಯಂತಿ, ಸಾರಿಕಾ,ಶಾರದ,ಶರ್ಮಿಳಾ,ಸೌಮ್ಯ, ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆ ಪಕ್ಷ ಜಿಲ್ಲಾ ಸಮಿತಿ ಸದಸ್ಯರಾದ ಕವಿರಾಜ್. ಎಸ್.ಕಾಂಚನ್ ಮತ್ತು ಧನ್ಯವಾದವನ್ನು ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ನಾಗರತ್ನ ನಾಡ ಮಾಡಿದರು.

