ಉಡುಪಿ: ವಿಜಯವೀರ ಸಂಘ (ರಿ) ಚಿತ್ಪಾಡಿ ಬೈಲೂರು ಸಂಘದ ಮಹಾಸಭೆ ದಿನಾಂಕ 14-06-2026 ಭಾನುವಾರದಂದು ಸಂಘದಲ್ಲಿ ಯಶಸ್ವಿಯಾಗಿ ನಡೆದು 2026-27 ರ ಅವಧಿಗೆ ಸಂಘದ ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ನಡೆದಿರುತ್ತದೆ.
ಪದಾಧಿಕಾರಿಗಳ ವಿವರ ಈ ರೀತಿ ಇದೆ.
ಅಧ್ಯಕ್ಷರು - ಹರೀಶ್ ಪೂಜಾರಿ
ಉಪಾಧ್ಯಕ್ಷರುಗಳು - ಸಚಿನ್ ಕುಮಾರ್ ಮತ್ತು ವಿಶ್ವನಾಥ್ ಶೇರಿಗಾರ್
ಪ್ರಧಾನ ಕಾರ್ಯದರ್ಶಿ - ಭಾಸ್ಕರ್ ಬಂಗೇರ
ಕೋಶಾಧಿಕಾರಿ-ಶರತ್ ಕುಂದರ್
ಗೌರವ ಅಧ್ಯಕ್ಷರುಗಳು-ಸದಾಶಿವ ಶೆಟ್ಟಿ ಮತ್ತು ಪ್ರಕಾಶ್ ಜಿ ಕೆ
ಜೊತೆ ಕಾರ್ಯದರ್ಶಿ- ವಿಜಯ್ ಡಿಸೋಜಾ
ಜೊತೆ ಕೋಶಾಧಿಕಾರಿ- ಪ್ರಾಣೇಶ್ ಪೂಜಾರಿ
ಕಲಾ ಕಾರ್ಯದರ್ಶಿ- ಉಮೇಶ್ ಆಚಾರ್ಯ
ಜೊತೆ ಕಲಾ ಕಾರ್ಯದರ್ಶಿ - ರವೀಂದ್ರ ಕೋಟ್ಯಾನ್
ಕ್ರೀಡಾ ಕಾರ್ಯದರ್ಶಿ - ಸಂಕೇತ್ ಶೆಟ್ಟಿ
ಜೊತೆ ಕ್ರೀಡಾ ಕಾರ್ಯದರ್ಶಿ - ಅಮಿತ್
ವಿಜಯವೀರ ಸಂಘವು 1972 ರಲ್ಲಿ ಸ್ಥಾಪಕ ಅಧ್ಯಕ್ಷರಾದ ಶ್ರೀ ಭೋಜ ಶೇರಿಗಾರ್ ಮತ್ತು ಇನ್ನಿತರ ಹಿರಿಯರ ಪರಿಶ್ರಮದಿಂದ ಪ್ರಾರಂಭಗೊಂಡು ಕಳೆದ 54 ವರ್ಷಗಳಿಂದ ಸಾಮಾಜಿಕವಾಗಿ ತನ್ನನ್ನು ತೊಡಗಿಸಿಕೊಂಡು ಜನರ ಪ್ರೀತಿಗೆ ಪಾತ್ರವಾಗಿದ್ದು,ಮುಂದೆಯೂ ನಿರಂತರವಾಗಿ ಸಾಮಾಜಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
