ಉಡುಪಿ: ನರ್ಸ್ ದಿನಾಚರಣೆಯ ಅಂಗವಾಗಿ ಜೈಂಟ್ಸ್ ಗ್ರೂಪ್ ಆಫ್ ಉಡುಪಿ ವತಿಯಿಂದ ದೀರ್ಘಕಾಲ ಸೇವೆ ಸಲ್ಲಿಸಿದ ನರ್ಸ್ ಸೋನಿಯಾ ಜೆನಿಫರ್ ಕ್ರಿಸ್ಟಿನಾ ಅವರನ್ನು ಸನ್ಮಾನಿಸಲಾಯಿತು.
ಈ ಸನ್ಮಾನ ಕಾರ್ಯಕ್ರಮವು ಇಂದು ಬ್ರಹ್ಮಗಿರಿ ಆರಾಧನಾ ಹಿರಿಯ ನಾಗರಿಕರ ಕೇಂದ್ರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ವಿನಯ್ ಕುಮಾರ್ ಪೂಜಾರಿ, ಮಾಜಿ ಅಧ್ಯಕ್ಷ ಎಂ. ಇಕ್ಬಾಲ್ ಮನ್ನಾ, ಆಡಳಿತ ನಿರ್ದೇಶಕ ದಿವಾಕರ್ ಪೂಜಾರಿ, ಜಂಟಿ ಆಡಳಿತ ನಿರ್ದೇಶಕ ಸಮಿತ್ ಶೆಟ್ಟಿ, ಹಣಕಾಸು ನಿರ್ದೇಶಕಿ ಡಯಾನಾ ಸುಪ್ರಿಯಾ ,ಡೇವಿಡ್ ಪ್ರೀತಮ್ ಹಾಗೂ ಮಾಜಿ ಹಣಕಾಸು ನಿರ್ದೇಶಕ ವಾದಿರಾಜ್ ಸಾಲಿಯನ್ ಮಾತನಾಡಿ ಸೋನಿಯಾ ಅವರು ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ಪ್ರಶಂಸಿಸಿದರು.
ಆರಂಭದಲ್ಲಿ ದಿವಾಕರ್ ಪೂಜಾರಿ ಪರಿಚಯ ಹಾಗೂ ಸ್ವಾಗತ ನೆರವೇರಿಸಿದರು. ಬಳಿಕ ಸಮಿತ್ ಶೆಟ್ಟಿ ವಂದನಾರ್ಪಣೆ ಸಲ್ಲಿಸಿದರು.
