ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ರಾಜ್ಯ ಸಮಿತಿ ಸಭೆಯು ರಾಜ್ಯಾಧ್ಯಕ್ಷೆ ಫಾತಿಮಾ ನಸೀಮ ರವರ ನೇತೃತ್ವದಲ್ಲಿ ಮಂಗಳೂರಿನ SDPI ಕಚೇರಿಯಲ್ಲಿ ನಡೆಯಿತು.
ವಿಮ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಾಹಿದಾ ತಸ್ನೀಂ ವೀಕ್ಷಕರಾಗಿ ಆಗಮಿಸಿದ್ದರು.
ಸಭೆಯಲ್ಲಿ ರಾಜ್ಯದ ಜನತೆಯು ಎದುರಿಸುತ್ತಿರುವ ಪ್ರಸ್ತುತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಹಾಗೂ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
1.ಶಿವಾಜಿ ನಗರ ತಡೆಗೋಡೆ ದುರಂತ: ಸರ್ಕಾರ ಎಚ್ಚೆತ್ತುಕೊಳ್ಳಲಿ..
ಧಿಡೀರನೆ ಉಂಟಾದ ಮಳೆಗೆ ಕಾಂಕ್ರೀಟ್ ತಡೆಗೋಡೆ ಕುಸಿದು ಬೆಂಗಳೂರಿನ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಬಳಿ ಏಳು ಮಂದಿ ಜೀವ ಕಳೆದುಕೊಂಡ ಘಟನೆ ಆಘಾತಕಾರಿಯಾಗಿದೆ.
ಸರಕಾರಗಳು ಎಷ್ಟು ಬದಲಾದರೂ, ಇಂತಹ ದುರಂತಗಳು ಸಂಭವಿಸುತ್ತಲೇ ಇರುತ್ತದೆ, ಬೆಂಗಳೂರಿನಲ್ಲಿ ಸ್ಪಲ್ಪ ಮಳೆಯಾದರು ಇಡೀ ಬೆಂಗಳೂರು ನೀರಿನಲ್ಲಿ ಮುಳುಗುತ್ತದೆ, ಯಾವುದೇ ಸರ್ಕಾರಕ್ಕೂ ಇದಕ್ಕೆ ಶಾಶ್ವತ ಪರಿಹಾರ ಒದಗಿಸಲು ಸಾಧ್ಯವಾಗಿಲ್ಲ, ಹಿಂದಿನ ಸರಕಾರ ಇದ್ದಾಗ ಅರ್ಧ ತಡೆಗೋಡೆಯನ್ನು ಮಾತ್ರ ಸರಿಪಡಿಸಲಾಗಿದೆ, ಕಾಂಕ್ರೀಟ್ ತಡೆಗೋಡೆಯ ಹಿಂದೆ ಸಾಮರ್ಥ್ಯ ಕ್ಕಿಂತ ಹೆಚ್ಚು ಮಣ್ಣನ್ನು ತುಂಬಲಾಗಿದೆ, ಹೀಗೆ ಹತ್ತು ಹಲವು ಕಾರಣಗಳನ್ನು ಹೇಳಿದರೂ ಪ್ರಕರಣದ ಗಂಭೀರತೆಯನ್ನು ಮರೆಮಾಚಲು ಸಾಧ್ಯವಿಲ್ಲ.
ರಾಜಕೀಯ ಕೆಸರೆರೆಚಾಟವನ್ನು ಬದಿಗಿಟ್ಟು ಸರಿಯಾದ ನಿರ್ವಹಣೆಯ ಜವಾಬ್ದಾರಿಯನ್ನು ರಾಜಕೀಯ ವ್ಯಕ್ತಿಗಳು, ಅಧಿಕಾರಿಗಳು ಪ್ರಾಮಾಣಿಕವಾಗಿ ವಹಿಸಿಕೊಂಡರೆ ಮಾತ್ರ ಇಂತಹ ದುರಂತಗಳನ್ನು ಮರುಕಳಿಸದಂತೆ ತಡೆಗಟ್ಟಬಹುದಾಗಿದೆ. ಕೇವಲ ಪರಿಹಾರ ಧನ ನೀಡಿ ಸಂತೈಸುವ ಬದಲು
ಈ ಬಾರಿಯ ಮಳೆಗಾಲದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಕಡೆಗಳಲ್ಲಿ ಸರಿಯಾದ ನಿರ್ವಹಣೆ ನಡೆಯಲಿ, ಪ್ರಕೃತಿ ವಿಕೋಪ ತಡೆಯ ಮುನ್ನೆಚ್ಚರಿಕೆಗಳು ಉತ್ತಮ ಮಟ್ಟದಲ್ಲಿರಲಿ.
2. “ಸೌಜನ್ಯ ಪ್ರಕರಣಕ್ಕೆ ಹೊಸ ದಿಕ್ಕು: ಸುಪ್ರೀಂ ಕೋರ್ಟ್ ಆದೇಶದಿಂದ ನ್ಯಾಯದ ನಿರೀಕ್ಷೆ ಹೆಚ್ಚಳ”
ಒಂದೂವರೆ ದಶಕದ ಹಿಂದಿನ ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣಕ್ಕೆ ಮತ್ತೆ ಮರುಜೀವ ನೀಡಿರುವ ಸುಪ್ರೀಂ ಕೋರ್ಟ್ ಆದೇಶ ಉತ್ತಮ
ಬೆಳವಣಿಗೆಯಾಗಿದ್ದು, ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯ ಸಮಿತಿಯು ಈ ಆದೇಶವನ್ನು ಸ್ವಾಗತಿಸುತ್ತಿದೆ. ಇಂತಹ ಒಂದು ಗಂಭೀರ ಪ್ರಕರಣದ ಕುರಿತು ನಿರಾಸಕ್ತಿ ವಹಿಸಿದ್ದೇಕೆ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿರುವ ಸುಪ್ರೀಂಕೋರ್ಟ್ ಅಗತ್ಯವಿದ್ದಲ್ಲಿ SIT ರಚಿಸಿ ತನಿಖೆ ಮುಂದುವರಿಸುವಂತೆ ಸೂಚಿಸಿದೆ.
ತೆರೆಮರೆಯಲ್ಲಿರುವ ಆರೋಪಿಗಳನ್ನು ಕಟಕಟೆಯಲ್ಲಿ ತಂದು ನಿಲ್ಲಿಸದೆ ಸೌಜನ್ಯ ಳಿಗೆ ನ್ಯಾಯ ದೊರಕಿಸಲು ಸಾಧ್ಯವಿಲ್ಲ.
ನ್ಯಾಯ ವ್ಯವಸ್ಥೆಯ ಮೇಲಿನ ಜನಸಾಮಾನ್ಯರ ನಂಬಿಕೆ
ಹುಸಿಯಾಗದಂತೆ , ನಿಷ್ಪಕ್ಷಪಾತ ತನಿಖೆಯಿಂದ ನೈಜ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಈ ಮೂಲಕ ಆಗ್ರಹಿಸುತ್ತಿದೆ.
3. “ವಾಣಿಜ್ಯ LPG ದರ ಏರಿಕೆ: ಕುಸಿಯುತ್ತಿರುವ ಜೀವನ ಮಟ್ಟ
ನಿರಂತರವಾದ ಬೆಲೆ ಏರಿಕೆ ಪ್ರಕ್ರಿಯೆಗಳಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ , ಮತ್ತೆ ವಾಣಿಜ್ಯ LPG ದರ 993 ರಷ್ಟು ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರ ನಿರ್ಧಾರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈಗಾಗಲೇ
ತಮ್ಮ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಸಂಕಷ್ಟ ಅನುಭವಿಸುತ್ತಿರುವ ದೇಶದ ಜನತೆ,ಒಂದೇ ಏಟಿಗೆ ಇಷ್ಟು ದೊಡ್ಡ ಮೊತ್ತವನ್ನು ಏರಿಸಿರುವ ಸರ್ಕಾರ ವಿರುದ್ಧ ಬೀದಿಗಿಳಿಯುವಂತಾಗಿದೆ. ಜೀವನೋಪಾಯಕ್ಕಾಗಿ ಸಣ್ಣ ಪುಟ್ಟ ಹೋಟೆಲ್ ಉದ್ಯಮಗಳನ್ನು ನಡೆಸುವ ಹೋಟೆಲ್ ಮಾಲಿಕರಿಗೆ ಇದು ಭರಿಸಲಾಗದ ಹೊರೆಯಾಗಿದ್ದು,ಇದರ ನೇರ ಪರಿಣಾಮದಿಂದ ಬಡ ಮಧ್ಯಮ ವರ್ಗದ ಕುಟುಂಬಗಳ ಜನರ ಜೀವನ ಮಟ್ಟ ಕುಸಿದುಹೋಗುತ್ತಿದೆ. ಗ್ಯಾಸ್ ಸಿಲಿಂಡರ್ ದರ ಏರಿಕೆ ಮಹಿಳೆಯರ ಮೇಲೆ ಕೇವಲ ಆರ್ಥಿಕ ಪರಿಣಾಮವಲ್ಲ, ಅದು ಅವರ ಆರೋಗ್ಯ, ಸಮಯ, ಮನಸ್ಥಿತಿ, ಮತ್ತು ಕುಟುಂಬದ ಸ್ಥಿತಿಗತಿಗಳ ಮೇಲೂ ಗಂಭೀರ ಪರಿಣಾಮ ಬೀರುತ್ತದೆ.
ಮನೆ ಖರ್ಚಿನ ಒತ್ತಡ ಹೆಚ್ಚಾಗುವುದರಿಂದ ಆರ್ಥಿಕ ಸ್ವಾವಲಂಬಿ ಜೀವನಕ್ಕೆ ತೊಡಕುಂಟಾಗುತ್ತದೆ. ಇದರಿಂದ
ಸ್ವತಂತ್ರ ನಿರ್ಧಾರಗಳನ್ನು ಕೈಗೊಳ್ಳಲು ಮಹಿಳೆಯರು ಅಸಮರ್ಥರಾಗುತ್ತಾರೆ. ಸಾಮಾಜಿಕ ಅಸಮಾನತೆಗೂ ಇದು ಕಾರಣವಾಗುತ್ತದೆ.
ತಕ್ಷಣವೇ ಈ ಸಮಸ್ಯೆಯನ್ನು ನಿಯಂತ್ರಿಸುವ ಅಗತ್ಯವಿದ್ದು, ಜನರ ಹಿತದೃಷ್ಟಿಯಿಂದ ಸೂಕ್ತ ಕ್ರಮಗಳನ್ನು ಕೈಗೊಂಡು ಜನ ಜೀವನವನ್ನು ಸುಧಾರಿಸುವುದು ಸರ್ಕಾರದ ಆದ್ಯತೆಯಾಗಬೇಕು.
ಸಭೆಯಲ್ಲಿ ರಾಜ್ಯ ಕಾರ್ಯದರ್ಶಿಗಳಾದ ಝುಲೈಖ ,ರಾಜ್ಯ ಕೋಶಾಧಿಕಾರಿ ನಾಝಿಯಾ, ರಾಜ್ಯ ಸಮಿತಿ ಸದಸ್ಯರಾದ ರಮ್ಲತ್, ಜಬೀನ ಮೈಸೂರು,ಝೊಹರಾ ಹಾಗೂ ಹಸೀನಾ ಹಾಜರಿದ್ದರು.
ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ಸ್ವಾಗತಿಸಿ ವರದಿ ಮಂಡಿಸಿದರು. ಹಾಗೂ ರಾಜ್ಯ ಕಾರ್ಯದರ್ಶಿ ಸಾನಿಯಾ ರವರು ಧನ್ಯವಾದಗೈದರು.
