ನವೀಕೃತ ಅಮೃತ ಶಿಲಾಮಯ ದೇವಸ್ಥಾನದ ನಿರ್ಮಾಣ ಕಾರ್ಯದ ವಿಜ್ಙಾಪಣಾ ಪತ್ರವನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ರಿಗೆ ನೀಡಿದ ಗುರುಸ್ವಾಮಿಯ ಸುರೇಶ್ ಸ್ವಾಮಿ



ಕಟಪಾಡಿ: ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದ (ರಿ )ಪಂಪಾ ಕ್ಷೇತ್ರ ,ರಿಶಾಲ್ ನಗರ ಕುರ್ಕಾಲ್ ,ಏಣಗುಡ್ಡೆ ರಸ್ತೆ ,ಕಟಪಾಡಿ , ಉಡುಪಿ ಇಲ್ಲಿ ಕರ್ನಾಟಕದಲ್ಲಿಯೇ ಪ್ರಪ್ರಥಮವಾಗಿ ನಿರ್ಮಾಣ ಗೊಳ್ಳಲಿರುವ ಸಂಪೂರ್ಣ ನವೀಕೃತ ಅಮೃತ ಶಿಲಾಮಯ ದೇವಸ್ಥಾನದ ನಿರ್ಮಾಣ ಕಾರ್ಯದ ವಿಜ್ಙಾಪಣಾ ಪತ್ರವನ್ನು ನಮ್ಮ ಕರ್ನಾಟಕ ಸರಕಾರದ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ರವರಿಗೆ ನಮ್ಮ ಗುರುಸ್ವಾಮಿಯವರಾದ ಸುರೇಶ್ ಸ್ವಾಮಿಯವರ ಮುಖಾಂತರ ನೀಡಲಾಯಿತು.

ಶ್ರೀ ಯುತರು ವಿಜ್ಙಾಪಣಾ ಪತ್ರವನ್ನು  ಸ್ವೀಕರಿಸಿ ತನ್ನಿಂದ ಗರಿಷ್ಠ ಮಟ್ಟದ ಧನಸಹಾಯ ಹಾಗೂ ನಮ್ಮೊಂದಿಗಿದ್ದು ಎಲ್ಲಾ ರೀತಿಯ ಸಹಕಾರ ಹಾಗೂ ನಾವು ಕರೆದಾಗ ಬಂದು ಸಲಹೆ ಸೂಚನೆಗಳನ್ನು ನೀಡಿ ಸಹಕರಿಸುತ್ತೇನೆ ಎಂದು ಆಶ್ವಾಸನೆಯನ್ನು ನೀಡಿರುತ್ತಾರೆ.

ಈ ಸಮಯದಲ್ಲಿ ಅಯ್ಯಪ್ಪ ಸ್ವಾಮಿ ಭಕ್ತ ವೃಂದದ ಪದಾಧಿಕಾರಿಗಳು ,ಸದಸ್ಯರು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.