ಹಿಜಾಬ್ ನಿಷೇಧ ವಾಪಸ್ - ಸರಕಾರದ ಕ್ರಮ ಸ್ವಾಗತಾರ್ಹ- ವಿಮೆನ್ ಇಂಡಿಯಾ ಮೂವ್ಮೆಂಟ್ – ಮಂಗಳೂರು ನಗರ ಜಿಲ್ಲೆ ಅಧ್ಯಕ್ಷೆ ಆಯಿಷಾ ಯಾಸ್ಮಿನ್

 


ಮಂಗಳೂರು: ಹಿಜಾಬ್‌ ಕುರಿತ ನಿರ್ಬಂಧಕ್ಕೆ ತೆರೆ ಎಳೆದು, ವಿದ್ಯಾರ್ಥಿನಿಯರ ಸಂವಿಧಾನಬದ್ಧ ಹಕ್ಕುಗಳು, ವೈಯಕ್ತಿಕ ನಂಬಿಕೆಗಳು ಹಾಗೂ ಶಿಕ್ಷಣ ಹಕ್ಕುಗಳನ್ನು ಗೌರವಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕ್ರಮವನ್ನು ವಿಮೆನ್ ಇಂಡಿಯಾ ಮೂವ್ಮೆಂಟ್ ಮಂಗಳೂರು ನಗರ ಜಿಲ್ಲೆ ಸ್ವಾಗತಿಸುತ್ತದೆ.

ಶಿಕ್ಷಣವು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದ್ದು, ಧಾರ್ಮಿಕ ನಂಬಿಕೆ ಅಥವಾ ವಸ್ತ್ರಧಾರಣೆಯ ಆಧಾರದ ಮೇಲೆ ಯಾರೂ ಶಿಕ್ಷಣದಿಂದ ವಂಚಿತರಾಗಬಾರದು. ಸರ್ಕಾರದ ಈ ನಿರ್ಧಾರವು ವಿದ್ಯಾರ್ಥಿನಿಯರ ಭವಿಷ್ಯಕ್ಕೆ ಹೊಸ ಆತ್ಮವಿಶ್ವಾಸ ಹಾಗೂ ಭರವಸೆಯನ್ನು ನೀಡಲಿದೆ ಎಂಬ ವಿಶ್ವಾಸವಿದೆ.

ಸೌಹಾರ್ದತೆ, ಸಮಾನತೆ, ಪರಸ್ಪರ ಗೌರವ ಮತ್ತು ನ್ಯಾಯದ ಮೌಲ್ಯಗಳು ಸಮಾಜದಲ್ಲಿ ಸದಾ ಉಳಿಯಬೇಕು. ಎಲ್ಲ ಸಮುದಾಯಗಳ ಹಕ್ಕುಗಳನ್ನು ಸಮಾನವಾಗಿ ಕಾಪಾಡುವ ಮೂಲಕ ರಾಜ್ಯದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ವಾತಾವರಣ ಮತ್ತಷ್ಟು ಬಲವಾಗಲಿ ಎಂಬುದು ನಮ್ಮ ಆಶಯ.

ಈ ನಿರ್ಧಾರವು ಶಿಕ್ಷಣ ಕ್ಷೇತ್ರದಲ್ಲಿ ಸಂವಿಧಾನಾತ್ಮಕ ಮೌಲ್ಯಗಳು ಹಾಗೂ ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡುವ ಮಹತ್ವದ ಹೆಜ್ಜೆಯಾಗಲಿ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಆಶಿಸುತ್ತದೆ.

ಆಯಿಷಾ ಯಾಸ್ಮಿನ್  ,ಅಧ್ಯಕ್ಷೆ ,ವಿಮೆನ್ ಇಂಡಿಯಾ ಮೂವ್ಮೆಂಟ್ ಮಂಗಳೂರು ನಗರ ಜಿಲ್ಲೆ