ಕಾಕ್ರೋಚ್ ಜನತಾ ಪಾರ್ಟಿ' ಸ್ಥಾಪಕ ಅಭಿಜಿತ್ ದೀಪ್ಕೆಗೆ ಕೊಲೆ ಬೆದರಿಕೆ

 


ನವದೆಹಲಿ: 'ಕಾಕ್ರೋಚ್ ಜನತಾ ಪಾರ್ಟಿ' ಎಂಬ ವ್ಯಂಗ್ಯ ಖಾತೆಯ ಸ್ಥಾಪಕ ಅಭಿಜಿತ್ ದೀಪ್ಕೆಗೆ ಕೊಲೆ ಬೆದರಿಕೆ ಬಂದಿದೆ. ಈ ಚಟುವಟಿಕೆ ನಿಲ್ಲಿಸದಿದ್ದರೆ ಕೊಲ್ಲುವುದಾಗಿ ಬಂದಿರುವ ಬೆದರಿಕೆ ಸಂದೇಶಗಳನ್ನು ದೀಪ್ಕೆ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ಅಕೌಂಟ್ ಬಂದ್ ಮಾಡು, ಇಲ್ಲದಿದ್ದರೆ ನಿನ್ನನ್ನು ಮುಗಿಸಿಬಿಡುತ್ತೇವೆ' ಎಂದು ಬೆದರಿಕೆ ಹಾಕಲಾಗಿದೆ. ಈ

ಬೆಳವಣಿಗೆಯಿಂದ ದೀಪ್ಕೆ ಅವರ ಪೋಷಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಅತ್ತ, 'ಕಾಕ್ರೋಚ್ ಜನತಾ ಪಾರ್ಟಿ' ಹೆಸರಿನಲ್ಲಿ ಶುರುವಾದ ಈ ವ್ಯಂಗ್ಯ ಖಾತೆಗಳು ದೇಶದ ಭದ್ರತೆಗೆ ಅಪಾಯಕಾರಿ ಎಂದು ಗುಪ್ತಚರ ಇಲಾಖೆ (IB) ಕೇಂದ್ರ ಸರ್ಕಾರಕ್ಕೆ ವರದಿ ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, 'ಅರಾಜಕತೆಯಿಂದ ಪ್ರಜಾಪ್ರಭುತ್ವವನ್ನು ನಾಶ ಮಾಡಲು ಸಾಧ್ಯವಿಲ್ಲ' ಎಂದು ಹೇಳಿದೆ.ಕಾಕ್ರೋಚ್ ಜನತಾ ಪಾರ್ಟಿಯ ಸೋಶಿಯಲ್ ಮೀಡಿಯಾ ಖಾತೆಗಳನ್ನು ಬಂದ್ ಮಾಡಿ. ನಿಮಗೆ ಹಣ ಸಿಗುತ್ತದೆ. ಬಿಜೆಪಿಗೆ ಸೇರಿಕೊಳ್ಳಿ. ಇಲ್ಲದಿದ್ದರೆ, ಅಮೆರಿಕದಲ್ಲಿ ನಿಮ್ಮನ್ನು ಕೊಲ್ಲಲಾಗುವುದು. - ಇದು ಅಭಿಜಿತ್ ದೀಪ್ಕೆ ಅವರು 'ಎಕ್ಸ್' (ಹಿಂದಿನ ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ಬೆದರಿಕೆ ಸಂದೇಶಗಳಲ್ಲಿ ಒಂದು. ಈ ಪಾರ್ಟಿ ಶುರು ಮಾಡಿದಾಗಿನಿಂದ ಫೋನ್ ಕರೆಗಳು ಮತ್ತು ಸೋಶಿಯಲ್ ಮೀಡಿಯಾ ಮೂಲಕ ನಿರಂತರವಾಗಿ ಬೆದರಿಕೆಗಳು ಬರುತ್ತಿವೆ ಎಂದು ಅಭಿಜಿತ್ ಹೇಳಿದ್ದಾರೆ. ವಿಡಿಯೋ ರೂಪದಲ್ಲಿ ಬಂದಿದ್ದ ಬೆದರಿಕೆ ಸಂದೇಶವನ್ನೂ ಅವರು ಶೇರ್ ಮಾಡಿದ್ದಾರೆ.