ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗೆ ಚುನಾವಣೆ ಮುಗಿದಿದ್ದು, ಇಂದು ಅದರ ಫಲಿತಾಂಶ ಪ್ರಕಟವಾಗಲಿದೆ. ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಮ್ನಲ್ಲಿರುವ ಇವಿಎಂಗಳಲ್ಲಿ ಅಡಕವಾಗಿದ್ದು, ಸಂಜೆ ವೇಳೆಗೆ ನಿಖರ ಚಿತ್ರಣ ಹೊರಬೀಳಲಿದೆ.
ಪಂಚರಾಜ್ಯ ಚುನಾವಣೆಗಳ ಪೈಕಿ ದೇಶದ ಗಮನ ಸೆಳೆದಿರುವುದು ಪಶ್ಚಿಮ ಬಂಗಾಳ. ತೀವ್ರ ಹೋರಾಟ ಕಂಡುಬಂದ ರಾಜ್ಯದಲ್ಲಿ ಬಿಜೆಪಿ ಇದೇ ಮೊದಲ ಬಾರಿಗೆ ಚಾರಿತ್ರಿಕ ವಿಜಯ ಸಾಧಿಸಲಿದೆ. ಆಡಳಿತಾರೂಢ ಟಿಎಂಸಿಗೆ ಸೋಲಾಗಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಇನ್ನೂ, ಅಸ್ಸಾಂನಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ, ತಮಿಳುನಾಡಿನಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿಕೂಟ, ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ಗೆ ಮುನ್ನಡೆ ಸಿಗಲಿದೆ ಎಂಬುದು ಲೆಕ್ಕಾಚಾರ. ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಎನ್ಆರ್ ಕಾಂಗ್ರೆಸ್ನ -ಬಿಜೆಪಿ ಕೂಟ ಮತ್ತೆ ಅಧಿಕಾರದ ಗದ್ದುಗೆ ಏರಲಿದೆ ಎಂದು ಅಂದಾಜಿಸಲಾಗಿದೆ.
ಬಂಗಾಳದಲ್ಲಿ ಬಿಜೆಪಿ ಕಮಾಲ್, ಟಿಎಂಸಿಗೆ ಹಿನ್ನಡೆ
ಇಡೀ ದೇಶವೇ ಉಸಿರು ಬಿಗಿ ಹಿಡಿದು ಕಾಯುತ್ತಿರುವ ಬಂಗಾಳದಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸುತ್ತಿದೆ. ಬಹುಮತಕ್ಕೆ ಬೇಕಾದ 148 ಸ್ಥಾನಗಳಿಗೆ ಹತ್ತಿರದಲ್ಲಿ ಬಿಜೆಪಿ ಇದೆ. ಆಡಳಿತಾರೂಢ ಟಿಎಂಸಿ ಕೂಡ ಅಷ್ಟೇ ಪ್ರಮಾಣದಲ್ಲಿ ಟಕ್ಕರ್ ನೀಡುತ್ತಿದೆ. ಇದು ಹೀಗೇ ಸಾಗಿದಲ್ಲಿ ಚುನಾವಣೋತ್ತರ ಸಮೀಕ್ಷೆಗಳ ಲೆಕ್ಕಾಚಾರ ಸತ್ಯವಾಗಲಿದೆ.
ಆಡಳಿತಾರೂಢ ಡಿಎಂಕೆ ಮಹಾಪತನ
ತಮಿಳುನಾಡಿನಲ್ಲಿ ಆಡಳಿತಾರೂಢ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಮೈತ್ರಿ ಮಹಾಪತನಕ್ಕೀಡಾಗಿದೆ. ಆರಂಭಿಕ ಎಣಿಕೆಯಲ್ಲಿ ಭಾರೀ ಮುನ್ನಡೆ ಸಾಧಿಸಿದ್ದ ಕೂಟವು ಈಗ ದಿಢೀರ್ ಮೂರನೇ ಸ್ಥಾನಕ್ಕೆ ಕುಸಿದಿದೆ. ಇದು ನಟ ವಿಜಯ್ ಪಕ್ಷವು ಮೊದಲ ಸ್ಥಾನಕ್ಕೆ ಬಂದಿದೆ.
ತಮಿಳುನಾಡಿನಲ್ಲಿ ವಿಜಯ್ ಸುನಾಮಿ
ತಮಿಳುನಾಡಿನಲ್ಲಿ ಎಲ್ಲರ ನಿರೀಕ್ಷೆ ಮೀರಿ ನಟ ವಿಜಯ್ ಅವರ ಟಿವಿಕೆ ಪಕ್ಷ ಮುನ್ನುಗ್ಗುತ್ತಿದೆ. ಆರಂಭಿಕ ಹಂತದಲ್ಲಿ ಸಪ್ಪಗಿದ್ದ ಪಕ್ಷವು ಈಗ ಏಕಾಏಕಿ 70 ಸ್ಥಾನಗಳಲ್ಲಿ ಏರಿಕೆ ಕಂಡಿದೆ. ಡಿಎಂಕೆ, ಎಡಿಎಂಕೆಗಿಂತ ಕೇವಲ 6 ಸ್ಥಾನಗಳ ಹಿಂದಿದೆ. ಡಿಎಂಕೆ, ಎಡಿಎಂಕೆ 76 ಸ್ಥಾನಗಳಲ್ಲಿ ಮುನ್ನಡೆ ಹೊಂದಿವೆ.
ಅಸ್ಸಾಂನಲ್ಲಿ ನೂರರ ಗಡಿಯತ್ತ ಬಿಜೆಪಿ
ಅಸ್ಸಾಂನಲ್ಲಿ ಏಕಪಕ್ಷೀಯವಾಗಿ ಬಿಜೆಪಿ ನೇತೃತ್ವದ ಮೈತ್ರಿ ನೂರರ ಗಡಿಯತ್ತ ಸಾಗುತ್ತಿದೆ. ಸದ್ಯಕ್ಕೆ 85 ಸ್ಥಾನಗಳಲ್ಲಿ ಎನ್ಡಿಎ ಮುನ್ನಡೆಯಲ್ಲಿದೆ. ಕಾಂಗ್ರೆಸ್ ನೇತೃತ್ವದ ಕೂಟವು ಕೇವಲ 26 ಸ್ಥಾನಗಳಲ್ಲಿ ಮಾತ್ರ ಮುಂದಿದೆ.
ಕೇರಳದಲ್ಲಿ ಆಡಳಿತರೂಢ ಎಲ್ ಡಿಎಫ್ ಈ ಬಾರಿ ಸೋಲಿನ ಸುಳಿಗೆ ಸಿಲುಕಿದ್ದು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಭಾರೀ ಮುನ್ನಡೆ ಕಾಯ್ದುಕೊಂಡಿದೆ.
