ವಿಶ್ಲೇಷಣೆ: ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ
ಉಡುಪಿ: ಬೇರೆಯವರಿಗೆ ಉಪದೇಶ ಮಾಡುವುದು ಸುಲಭ ,ಆದರೆ ಅದನ್ನು ವೈಯುಕ್ತಿಕವಾಗಿ ಪಾಲಿಸುವುದು ತುಂಬಾ ಕಷ್ಟ.ಅದಕ್ಕೆ ಹೇಳುವುದು ಉಪದೇಶ ಮಾಡುವಾಗ ತುಂಬಾ ಜಾಗೃತರಾಗಿರಬೇಕು.ದೇಶದ ಪ್ರಧಾನಿ ಮೇೂದಿಯವರು ನಾವು ಮುಂದೆ ಎದುರಿಸಬೇಕಾದ ಆರ್ಥಿಕ ಸಂಕಷ್ಟದ ಕುರಿತಾಗಿ ಮುಂದೆ ಜನಸಾಮಾನ್ಯರು ದಿನ ನಿತ್ಯದ ಬದುಕಿನಲ್ಲಿ ವಹಿಸಬೇಕಾದ ಏಳು ಸೂತ್ರಗಳನ್ನು ಬಹಳ ಸುಲಭವಾಗಿ ಬೇೂಧಿಸಿ ಬಿಟ್ಟಿದ್ದಾರೆ.ಇದು ಜನಸಾಮಾನ್ಯರಿಗೆ ಮಾತ್ರ ಅನ್ವಯಿಸುತ್ತದಾ ಅಥವಾ ರಾಜಕೀಯ ಅಧಿಕಾರದಲ್ಲಿರುವ ತಮ್ಮಂತಹ ರಾಜಕಾರಣಿಗಳಿಗೂ ಅನ್ವಯಿಸುತ್ತದಾ ಅನ್ನುವುದನ್ನು ಮೊದಲು ಸ್ವಷ್ಟ ಪಡಿಸಬೇಕಾಗಿತ್ತು.
ಜನಸಾಮಾನ್ಯರು ಸ್ವಂತ ವಾಹನಗಳನ್ನು ಕಡಿಮೆ ಬಳಸಿ ಸಾರ್ವಜನಿಕ ವಾಹನಗಳನ್ನು ಹೆಚ್ಚಾಗಿ ಬಳಸಿ; ವಿದೇಶಕ್ಕೆ ಹೇೂಗುವ ಕಾರ್ಯಕ್ರಮವಿದ್ದರೆ ಒಂದು ವರುಷಕ್ಕೆ ಮುಂದೂಡಿ. ಚಿನ್ನದ ಖರೀದಿ ಸದ್ಯಕ್ಕೆ ಕೈ ಬಿಡಿ.ಇಂತಹ ಕೆಲವೊಂದು ಉಚಿತ ಸಲಹೆಗಳನ್ನು ಸಾರ್ವಜನಿಕರಿಗೆ ನೀಡಿದ್ದಾರೆ.ಹಾಗಾದರೆ ನಮ್ಮ ಪ್ರಧಾನ ಮಂತ್ರಿಗಳಿಂದ ಹಿಡಿದು ಸಾಮಾನ್ಯ ಒಬ್ಬ ಶಾಸಕ ತನ್ನ ಅಗತ್ಯ ಸರಕಾರಿ ಕೆಲಸ ಬಿಟ್ಟು ವೈಯುಕ್ತಿಕ ಕೆಲಸಗಳಾದ ಮದುವೆ ಉಪನಯನ ಮುಂಜಿ ನಾಗ ಮಂಡಲ ಬ್ರಹ್ಮಕಲಶೇೂತ್ಸವ ದಂತಹ ಕಾರ್ಯಕ್ರಮಗಳಿಗೂ ಈ ಶಾಸಕರು ಮಂತ್ರಿಗಳು ಸರಕಾರಿ ಕಾರಿನಲ್ಲಿ ಊರೆಲ್ಲ ಸುತ್ತುತ್ತಾರೆ ಅಂದರೆ ಇವುಗಳಿಗೆ ಪೆಟ್ರೋಲು ಡೀಸೆಲ್ ಹಾಕ ಬೇಕಾಗಿಲ್ಲ. ಯಾಕೆಂದರೆ ಇವರ ಕಾರುಗಳು ಬರೇ ಗಾಳಿ ನೀರಿನಲ್ಲಿ ಓಡಾಡುತ್ತದೆಯಾ..ಹೇಗೆ.? ಇವರಿಗೂ ಬುದ್ಧಿವಾದ ಹೇಳುವ ಕೆಲಸ ಪ್ರಧಾನಿಗಳು ಮಾಡ ಬೇಕಾಗಿತ್ತು.ಮಾತ್ರವಲ್ಲ ಪ್ರಧಾನಿಗಳ ಉಪದೇಶವನ್ನು ಇವರು ಜನಸಾಮಾನ್ಯರಿಗೆ ಒಂದು ಸಂದೇಶ ಎಂದು ಹೇಳುವ ಮೊದಲು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು.
ಖಾಸಗಿ ಕಾರ್ಯಕ್ರಮಗಳಿಗೂ ಪ್ರಧಾನ ಮಂತ್ರಿಗಳಿಂದ ಮಂತ್ರಿ ಮಾಗಧರು ಬಂದು ಹೇೂಗುವುದು..ಅವರ ಹಿಂದೆ ಮಂತ್ರಿ ಮಾಗಧರು ಅಧಿಕಾರಿಗಳ ನೂರಾರು ಕಾರುಗಳು ಹಿಂಡು ಹಿಂಡಾಗಿ ಓಡಾಡುವುದೆಂದರೆ ಇದು ದೇಶದ ಆರ್ಥಿಕತೆಗೆ ಹೊರೆಯಲ್ಲವೇ ?ಇದನ್ನು ಪ್ರಧಾನಿಗಳು ಮೊದಲು ತಿಳಿಸ ಬೇಕಾಗಿತ್ತು. ವಾಸ್ತವಿಕತೆಯ ಚಿತ್ರಣ ನೇೂಡಿ ಆತ್ಮ ವಿಮರ್ಶೆ ಮಾಡಿಕೊಂಡು ಉಪದೇಶ ಮಾಡಿದ್ದರೆ ಜನಸಾಮಾನ್ಯರು ಒಪ್ಪಿಗೆ ಸೂಚಿಸಬಹುದಿತ್ತು.ಇದನ್ನು ಬಿಟ್ಟು ಚಿಕ್ಕಪುಟ್ಟ ಖಾಸಗಿ ಕಾರ್ಯಕ್ರಮಗಳಿಗೂ ವಿಮಾನದಲ್ಲಿಯೇ ಬರುವುದು ಅಲ್ಲಿಂದ ಮತ್ತೆ ಹೆಲಿಕಾಪ್ಟರ್ ಬಳಕೆ..ಇದೆಲ್ಲ ನೇುಾಡುವಾಗ ಮೇರು ಸ್ಥಾನದ ನಾಯಕರು ಹೇಳುವುದು ಒಂದು ಮಾಡುವುದು ಇನ್ನೊಂದು ಅನ್ನಿಸುವುದು ಸಹಜ.ಜನಸಾಮಾನ್ಯರಿಗೆ ರಾಷ್ಟ್ರದ ಆರ್ಥಿಕತೆಯ ಕುರಿತಾಗಿ ದೊಡ್ಡ ಸಲಹೆಗಳನ್ನು ನೀಡುವ ಮೊದಲು ತಮ್ಮ ವರ್ತುಲದಲ್ಲಿಯೇ ಇದನ್ನು ಮೊದಲು ಪ್ರಯೇೂಗಿಸಿ ಜನಸಾಮಾನ್ಯರಿಗೆ ಉಪದೇಶ ಮಾಡ ಬೇಕಾಗಿತ್ತು.
ಸದ್ಯಕ್ಕೆ ದೇಶದಲ್ಲಿ ಚುನಾವಣೆ ರ್ಯಾಲಿ ಶಂಕು ಸ್ಥಾಪನೆ ಉದ್ಘಾಟನೆ ಎಲ್ಲಾ ಮುಗಿಯಿತು ..ಹಾಗಾಗಿ ಇನ್ನು ಒಂದು ವರುಷ ಜನಸಾಮಾನ್ಯರು ಚಂಡಿ ಬಟ್ಟೆ ಹೊಟ್ಟೆಗೆ ಕಟ್ಟಿ ಮಲಗಿ ಅನ್ನುವ ಸಂದೇಶ ಹೊರ ಬಂದಿದೆ ಅಷ್ಟೆ.
ಇಂತಹ ಆರ್ಥಿಕ ಸಂಕಷ್ಟ ಕಾಲದಲ್ಲಿ ನಮ್ಮ ಸಂಸದರು ಶಾಸಕರುಗಳಿಗೆ ನೀಡುವ ಸಂಬಳ ಸಾರಿಗೆ ಭತ್ಯೆ ಪಿಂಚಣಿ ಇವುಗಳಿಗೆ ಯಾವುದೇ ಕಡಿವಾಣ ಹಾಕುವ ಉಪದೇಶ ಪ್ರಧಾನಿಗಳ ಬಾಯಿಯಿಂದ ಬರಲೇ ಇಲ್ಲ.ಇದನ್ನು ಬಿಟ್ಟು 543 ಸಂಸತ್ತಿನ ಸದಸ್ಯರ ಸಂಖ್ಯೆಯನ್ನು 850 ಏರಿಸಬೇಕು ಅನ್ನುವ ಇವರ ದೂರಾಲೇೂಚನೆ ಸರ್ಕಾರದ ಬೊಕ್ಕಸಕ್ಕೆ ರಾಷ್ಟ್ರಕ್ಕೆ ಹೊರೆ ಅನ್ನುವ ಆಲೇೂಚನೆ ಸಂಸತ್ತಿನಲ್ಲಿ ಮಾತನಾಡುವಾಗ ಯಾಕೆ ಬರಲಿಲ್ಲ ಅನ್ನುವುದು ಪ್ರಧಾನಿಯವರಿಗೆ ಜನಸಾಮಾನ್ಯರು ಕೇಳುವ ನೇರ ಪ್ರಶ್ನೆ.?
ಪ್ರಧಾನಿ ಮೇೂದೀಜಿ ಅವರೆ ನೀವು ದೇಶದ ಆರ್ಥಿಕ ಸಂಕಷ್ಟದ ಕಾಲದಲ್ಲಿ ಸುಧಾರಣೆಯ ದೃಷ್ಟಿಯಿಂದ ಹೇಳಿದ ಉಪದೇಶ ಶ್ಲಾಘನೀಯ. ಆದರೆ ಅದರ ಜವಾಬ್ದಾರಿಯನ್ನು ಕೇವಲ ಜನಸಾಮಾನ್ಯರ ಮೇಲೆ ಹೇರಿ ತಾವು ಮತ್ತು ರಾಜಕಾರಣಿಗಳು ಮಾತ್ರ ಆರಾಮವಾಗಿ ಬದುಕ ಬೇಕೆಂಬ ರೀತಿಯಲ್ಲಿ ಉಪದೇಶ ಮಾಡಿರುವುದು ತುಂಬಾ ಬೇಸರ ತಂದಿದೆ.
ಲಾಲ್ ಬಹುದ್ದೂರು ಶಾಸ್ತ್ರಿ ಅವರು ಪ್ರಧಾನಿಯಾಗಿದ್ದಾಗ ದೇಶದಲ್ಲಿ ಆಹಾರ ಕೊರತೆ ಬಂದಾಗ ಅವರು ಜನರಿಗೆ ಒಂದು ಹೊತ್ತಿನ ಊಟ ಬಿಡಿ ಅನ್ನುವ ಸಂದೇಶವನ್ನು ಜನರಿಗೆ ಮಾತಿನಲ್ಲಿ ಹೇಳದೆ ಒಂದು ಹೊತ್ತಿನ ಊಟವನ್ನೆ ಸ್ವತಃ ಅವರೆ ಬಿಟ್ಟು ದೇಶಕ್ಕೆ ಮಾದರಿಯಾಗಿ ನಿಂತ ಪ್ರಧಾನಿ ಎಂಬ ಕೀರ್ತಿ ಅವರಿಗಿದೆ.ಇದು ನಮಗೆ ಆದರ್ಶಪ್ರಾಯ..ಜೈ ಜವಾನ್ ಜೈ ಕಿಶಾನ್..ಅನ್ನುವ ಘೇೂಷಣೆಗೂ ಮಹತ್ವ ಬಂತು.ಆಡುವುದಕ್ಕಿಂತ ಮಾಡಿ ತೇೂರಿಸುವುದೇ ಉತ್ತಮ ಅನ್ನುವ ನಾಣ್ನುಡಿಯೇ ಶ್ರೇಷ್ಠವಲ್ಲವೇ?
