ಉಡುಪಿ: ಇಂದ್ರಾಣಿಯ ನವೀಕೃತ ಮುಖ್ಯಪ್ರಾಣ ದೇವರ ಗುಡಿಯಲ್ಲಿ ಅಷ್ಟಬಂಧ ಪುನಃಪ್ರತಿಷ್ಠೆಯ ಸಡಗರ ಮುಗಿಲುಮುಟ್ಟಿದೆ.ಪ್ರತಿನಿತ್ಯ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನಸೂರೆಗೊಳ್ಳುತ್ತಿವೆ.ಇದೇ ವೇಳೆ ರವಿ ಶೆಟ್ಟಿಗಾರ್ ದಂಪತಿ ಇಂದ್ರಾಣಿ ನವೀಕೃತ ಮುಖ್ಯಪ್ರಾಣ ದೇವರ ಗುಡಿಗೆ ಬೃಹತ್ ದೀಪ ಕೊಡುಗೆ ನೀಡುವ ಮೂಲಕ ದೇವರ ಸೇವೆ ಮಾಡಿದ್ದಾರೆ.ಈ ಬೃಹತ್ ದೀಪವನ್ನು ಬೆಳಗಿಸಿ ಚಾಲನೆ ನೀಡಿ ದೇವಳದ ತಂತ್ರಿಯವರು ಶ್ರೀ ದೇವರ ಪ್ರಸಾದ ನೀಡಿ ದಂಪತಿಯನ್ನು ಹರಿಸಿದರು.

