ಕಟಪಾಡಿ: ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದ ರಿ. ಪಂಪಾ ಕ್ಷೇತ್ರ ರಿಶಾಲ್ ನಗರ ಕುರ್ಕಾಲ್ ಕಟಪಾಡಿ ಇದರ ನವೀಕೃತ ಸಂಪೂರ್ಣ ಅಮೃತ ಶಿಲಾಮಯ ದೇವಸ್ಥಾನದ ನಿರ್ಮಾಣ ಕಾರ್ಯವನ್ನು ವಿದೇಶದಲ್ಲಿ ನೆಲೆಸಿರುವಂತಹ ನವೀಕೃತ ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಶಶಿಧರ ಶೆಟ್ಟಿ ಮಲ್ಲಾರು ಕಾಪು ಇವರು ಅಯ್ಯಪ್ಪ ಸ್ವಾಮಿ ಸಾನಿಧ್ಯಕ್ಕೆ ಭೇಟಿ ಕೊಟ್ಟು, ದೇವಸ್ಥಾನದ ನಿರ್ಮಾಣ ಕಾರ್ಯವನ್ನು ವೀಕ್ಷಿಸಿದರು . ಹಾಗೂ ಮುಂದಿನ ಕೆಲಸ ಕಾರ್ಯದ ಬಗ್ಗೆ ಸಮಾಲೋಚನೆ ನಡೆಸಿ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಮಯದಲ್ಲಿ ಅಯ್ಯಪ್ಪ ಸ್ವಾಮಿ ಮಹಿಳಾ ಘಟಕದ ಮುಖ್ಯಸ್ಥರಾದ ಗೀತಾಂಜಲಿ ಸುವರ್ಣ ಕಟಪಾಡಿ, ನವೀಕೃತ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ರಿಶಾನ್ ತಿಂಗಳಾಯ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಸನಿಲ್, ಕ್ಷೇತ್ರದ ಗುರುಸ್ವಾಮಿಗಳಾದ ಸುರೇಶ್ ಜತ್ತನ್, ಖಜಾಂಚಿ ಮಂಜುನಾಥ ಅಗ್ರಹಾರ,ಸದಸ್ಯರಾದ ಕೇಶವ ಕುಂದರ್, ಸುಕೇಶ್ ಕೋಟ್ಯಾನ್, ದಿಲೀಪ್ ಅಗ್ರಹಾರ, ಸಂತೋಷ್ ಮಡಿವಾಳ,ದಾಮೋಧರ ಅಮೀನ್, ಪ್ರಶಾಂತ್,ಕೇಶವ ಕೋಟ್ಯಾನ್, ವಸಂತ್ ಕುಂದರ್ ಅಭಿಷೇಕ್ ಶ್ರೀಯಾನ್ ,ಕಿರಣ್ ಮಟ್ಟು, ಸುರೇಶ್ ಕುಂದರ್, ಸತೀಶ್ ಶೆಟ್ಟಿ,ರವಿ ತಿಂಗಳಾಯ, ರಾಜ್ ಕುರ್ಕಾಲ್,ಸುಲೋಚನ ಹಾಗೂ ಹಿರಿಯರಾದ ಶೀನ ಪುತ್ರನ್ ಮತ್ತಿತರರು ಉಪಸ್ಥಿತರಿದ್ದರು.

