ಉಡುಪಿ: ಕನ್ನಡದ ಹೆಸರಾಂತ ಲೇಖಕಿ ವೈದೇಹಿಗೆ 'ಕರ್ತೃತ್ವ ಸಮಗ್ರ ಸಮ್ಮಾನ್ ' ಪ್ರಶಸ್ತಿ : 1 ಲಕ್ಷ ಗೌರವಧನ - ಪ್ರಶಸ್ತಿ ಪದಕ


ವೈದೇಹಿ


ಉಡುಪಿ: ಸೂಕ್ಷ್ಮ ಸಂವೇದನೆಯ ಲೇಖಕರಿಗೆ ಭಾರತೀಯ ಭಾಷಾ ಪರಿಷತ್ ಕೋಲ್ಕತ್ತಾ ನೀಡುವ ಪ್ರತಿಷ್ಠಿತ 'ಕರ್ತೃತ್ವ  ಸಮಗ್ರ ಸಮ್ಮಾನ್ ' ಪ್ರಶಸ್ತಿಗೆ ಕನ್ನಡದ ಲೇಖಕಿ ವೈದೇಹಿ ಭಾಜನರಾಗಿದ್ದಾರೆ. ಪ್ರಶಸ್ತಿಯು ಒಂದು ಲಕ್ಷ ಗೌರವ ಧನದೊಂದಿಗೆ ಪದಕ ಒಳಗೊಂಡಿರುತ್ತದೆ. ಪ್ರಶಸ್ತಿ ಯನ್ನು ಇದೇ ಮೇ ಒಂದರಂದು ಪ್ರಸಿದ್ಧ ಬಂಗಾಳಿ ಲೇಖಕ ರಾಮ್ ಕುಮಾರ್ ಮುಖೋಪಾಧ್ಯಾಯ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ವೈದೇಹಿ ,ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ವಾಸವಾಗಿದ್ದಾರೆ.