ಸಂವಿಧಾನ ವಿರೋಧಿ ಶ್ರೀಕಾಂತ್ ಶೆಟ್ಟಿಯನ್ನು ಜೖಲಿಗಟ್ಟಿ : ಸುಂದರ ಮಾಸ್ತರ್-ಶ್ಯಾಮರಾಜ್ ಬಿರ್ತಿ ಒತ್ತಾಯ



ಉಡುಪಿ: ಈ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ತಮ್ಮ ತಮ್ಮ ಧರ್ಮದ ಆಚರಣೆ , ಧರ್ಮದಲ್ಲಿ ಪ್ರಚಾರ ಮಾಡುವ ಹಕ್ಕು ಈ ದೇಶದ ಪ್ರತಿಯೊಬ್ಬನಿಗೂ ಇದೆ , ಧರ್ಮದ  ಆಚರಣೆಗೆ , ಧರ್ಮದ ಕಾರ್ಯಕ್ರಮಗಳಿಗೆ ತಡೆಯೊಡ್ಡುವುದು ಕಾನೂನಿಗೆ ವಿರುಧ್ಧವಾಗುತ್ತದೆ.ಸಂವಿಧಾನ ವಿರೋಧಿಯಾಗಿದೆ.ಕಳೆದಬಾರಿ ಕಾರ್ಕಳದಲ್ಲಿ ಪ್ರಾರ್ಥನಾ ಮಂದಿರಕ್ಕೆ  ಅತಿಕ್ರಮವಾಗಿ ನುಗ್ಗಿ ದಾಂಧಲೆ ಮಾಡಿ ಗೂಂಡಾ ವರ್ತನೆ ಮಾಡಿದ ಇದೇ ಶ್ರೀಕಾಂತ ಶೆಟ್ಟಿ  ಈಗ ಮತ್ತೊಂದು ಗೂಂಡಾ ಕೃತ್ಯಕ್ಕೆ ತಯಾರಿ ನಡೆಸಿದ್ದಾನೆ. ಇವನನ್ನು ಗೂಂಡಾ ಕಾಯ್ದೆಯಡಿ ಗಡಿಪಾರು ಮಾಡಬೇಕು. ಅವನಿಗೆ ಸೂಕ್ತ ಕಾನೂನಿನಡಿ ಶಿಕ್ಷೆ ಕೊಡದೇ ಹೋದರೆ ಈ ಉಡುಪಿ ಜಿಲ್ಲೆಯಲ್ಲೂ ಕೋಮು ಸಂಘರ್ಷ  ಹೊತ್ತಿ ಉರಿಯಲು ಕಾರಣವಾಗಬಹುದು.

ಅವನೇ ಹೇಳುವಂತೆ ಯಾವುದು ಮೂಢ ನಂಬಿಕೆ ? ಲೀಟರ್ ಗಟ್ಟಲೆ ಹಾಲು ಕಲ್ಲಿನ ಮೂರ್ತಿಗೆ ಸುರಿದು ಹಾಳು ಮಾಡುವುದೋ ? ಹೋಮ ,  ಹವನದ ಹೆಸರಲ್ಲಿ ಕೆಜಿಗಟ್ಟಲೆ  ತುಪ್ಪ , ತೆಂಗಿನ ಕಾಯಿ , ಬಾಳೆಹಣ್ಣು  ಗಳನ್ನು ಬೆಂಕಿಗೆ ಹಾಕಿ  ಸುಡುವುದೋ ? ಖಾಯಿಲೆ ಗುಣವಾಗುತ್ತದೆ ಎಂದು ತಾಯಿತ ಕಟ್ಟಿಕೊಳ್ಳುವುದೋ ? ವಿವಿಧ ಪೂಜೆ ಮಾಡಿಸುವುದೋ ? ಯಾವುದು ಮೌಢ್ಯ ?  ಪೂಜೆ , ಹೋಮ , ಹವನ ಮಾಡಿ ಖಾಯಿಲೆ ವಾಸಿಮಾಡುವಂತಿದ್ದರೆ  ಇಷ್ಟೊಂದು ಆಸ್ಪತ್ರೆಗಳು ಯಾಕೆ ಬೇಕು  ?

ನೆಮ್ಮದಿಯ ಸಹಭಾಳ್ವೆಯ ಉಡುಪಿ ಜಿಲ್ಲೆಯಲ್ಲಿ  ಈ ಹಿಂದು ಜಾಗರಣೆ ವೇದಿಕೆಯ ಶ್ರೀಕಾಂತ ಶೆಟ್ಟಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾನೆ.ಯಾವ ಕಾರಣಕ್ಕೂ  ಉಡುಪಿ ಜಿಲ್ಲೆಯ ಸೌಹಾರ್ದತೆ ಹಾಳಾಗಬಾರದು , ಅವರವರು ತಮ್ಮ ತಮ್ಮ ಧರ್ಮದ ಕಾರ್ಯಕ್ರಮ ಮತ್ತು ಆಚರಣೆಯನ್ನು ನಡೆಸಲು ಜಿಲ್ಲಾಡಳಿತ ಮತ್ತು  ಫೋಲೀಸ್ ಇಲಾಖೆ ಅನುವು ಮಾಡಿಕೊಡಬೇಕು. ಕೋಮು ಧ್ವೇಷ ಹರಡುವವರನ್ನು ಈ ಕೂಡಲೇ ಬಂಧಿಸಿ ಸೂಕ್ತ ಕ್ರಮಕೖಗೊಳ್ಳಬೇಕು. 

ಉಡುಪಿಯ ರಾಜ ಬೀದಿಗಳಲ್ಲಿ ತಲವಾರು ಬೀಸುತ್ತಾ , ತ್ರಿಶೂಲ ಜಳಪಿಸುತ್ತಾ ಮೆರವಣಿಗೆ ನಡೆಸಿದ ಈ ಹಿಂದುತ್ವವಾದಿಗಳನ್ನು ಈಗಲೇ ಮಟ್ಟಹಾಕದಿದ್ದರೆ  ಮುಂದೆ ಅದಕ್ಕೆ  ಬಹಳ ಹೆಚ್ಚಿನ ಬೆಲೆ ತೆರಬೇಕಾಗಬಹುದು.ಆದ್ದರಿಂದ ಈ ಹಿಂದುತ್ವ ಗೂಂಡಾ ಶ್ರೀಕಾಂತ ಶೆಟ್ಟಿ ಯನ್ನು ಈ ಕೂಡಲೇ ಬಂಧಿಸಿ ಜೖಲಿಗಟ್ಟಿ , ಉಡುಪಿ ಜಿಲ್ಲೆಯಲ್ಲಿ ಎಲ್ಲಾ ಧರ್ಮದವರೂ ತಮ್ಮ ತಮ್ಮ  ಧರ್ಮದ ಕಾರ್ಯಕ್ರಮವನ್ನು  ಸಾಂಗವಾಗಿ ನಡೆಸುವ ಅವಕಾಶ ಕಲ್ಪಿಸಿಕೊಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ ) ಅಂಬೇಡ್ಕರ್ ವಾದ ಇದರ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್ ಮತ್ತು  ಮೖಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಆಗ್ರಹಿಸಿದ್ದಾರೆ.