ಪತ್ರಕರ್ತ ಪ್ರಗತ್ ಕೆ.ಆರ್ ಪುತ್ರ 6 ವರ್ಷದ " ಋಷ್ಯ " ಕಾರು ಡಿಕ್ಕಿಯಾಗಿ ಸಾವು - ಪತ್ರಕರ್ತ ಮಿತ್ರರಿಂದ ತೀವ್ರ ಸಂತಾಪ

 


ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಪತ್ರಕರ್ತ ಪ್ರಗತ್ ಕೆ.ಆರ್. ಮತ್ತು ರಂಜನಾ ದಂಪತಿಯ 6 ವರ್ಷದ ಮಗ  ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಇಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಆಘಾತಕಾರಿ ಘಟನೆ ಸಂಭವಿಸಿದೆ.ತೀರ್ಥಹಳ್ಳಿ ತಾಲೂಕು ತ್ರಿಯಂಬಕಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡಗದ್ದೆಯ ಋಷ್ಯ (6) ಮೃತ ಬಾಲಕ.

ಮನೆಯ ಮುಂದೆ ಆಟವಾಡುತ್ತಾ  ರಸ್ತೆಗೆ ಬಂದ ಬಾಲಕನಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.ತಕ್ಷಣ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಸು ಚಿಕಿತ್ಸೆ ನೀಡಿದರೂ ತಲೆ ಭಾಗಕ್ಕೆ ತೀವ್ರ ಗಾಯಗಳಾಗಿದ್ದರಿಂದ ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಗಿ ತಿಳಿದುಬಂದಿದೆ.

ಈ ದುಃಖಕರ ಘಟನೆಯ  ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಕೆಲವು ಸಮಯದ ಹಿಂದೆ ತಂದೆಯನ್ನು ಕಳೆದುಕೊಂಡಿದ್ದ ಪತ್ರಕರ್ತ ಪ್ರಗತ್ ಕೆ.ಆರ್ , ಪುತ್ರನ ಸಾವಿನ ಸುದ್ದಿಯಿಂದ ತೀವ್ರ ಆಘಾತಕ್ಕೊಳಗಾಗಿದ್ದು ಪತ್ರಕರ್ತ ಮಿತ್ರರು ತೀವ್ರ ಸಂತಾಪ ಸೂಚಿಸಿದ್ದಾರೆ.