ಉಡುಪಿ : ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕ ಬರ್ಕಾಸ್ತು ಆದರೂ ಜಿಲ್ಲಾಧ್ಯಕ್ಷೆ ಎಂದು ಸ್ವಯಂ ಘೋಷಿಸುತ್ತಿರುವ ಜ್ಯೋತಿ ಸೇರಿಗಾರ್ತಿಯ ವಿರುದ್ದ ಕರವೇ ಕಾರ್ಯಕರ್ತರು ಸಿಡಿದೆದ್ದಿದ್ದಾರೆ.ಇಂದು ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದರು.
ಇಂದು ಉಡುಪಿಯ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಕರವೇ ಕಾರ್ಯಕರ್ತೆ ಮೀರಾ ಅವರು ಕನ್ನಡಪರ ಹೋರಾಟಗಾರರಾದ ನಾವು ಬಹಳ ಅಭಿಮಾನವಿಟ್ಟು ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಮಹಿಳಾ ಘಟಕಕ್ಕೆ ಸೇರಿದ್ದು, ನಾವಿಲ್ಲಿ ಸಕ್ರಿಯ ಕಾರ್ಯಕರ್ತರಾಗಿರುತ್ತೇವೆ. ನಾವು ಕನ್ನಡ ಪರ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದು ಕನ್ನಡ ನಾಡು-ನುಡಿಗಾಗಿ ಸೇವೆಯನ್ನ ಸಲ್ಲಿಸುತ್ತಿದ್ದೇವೆ ಎಂದರು.
ಮೊದಮೊದಲಿಗೆ ಇಲ್ಲಿ ಎಲ್ಲವೂ ಸರಿಯಾಗಿತ್ತು. ತದನಂತರ ಕರ್ನಾಟಕ ರಕ್ಷಣಾ ವೇದಿಕೆಯ ಈ ಮೊದಲಿನ ಮಹಿಳಾ ಜಿಲ್ಲಾಧ್ಯಕ್ಷೆ ಜ್ಯೋತಿ ಶೇರಿಗಾರ್ತಿಯವರು ಆ ಸ್ಥಾನಕ್ಕೆ ಸೂಕ್ತ ವ್ಯಕ್ತಿಯಲ್ಲ ಅಂತ ತಿಳಿದುಬಂತು. ಅವರ ನಾಯಕತ್ವದಲ್ಲಿ ನಮಗೆ ಮುಂದುವರಿಯಲು ಇಷ್ಟವಿಲ್ಲದೆ ನಾವು ಸಂಘಟನೆಯನ್ನು ಬಿಟ್ಟು ಹೊರಬರಬೇಕು ಎಂದು ನಿರ್ಣಯಿಸಿರುತ್ತೇವೆ. ಈ ಮೂಲಕ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯತ್ವಕ್ಕೆ ನಾವು ಸಾಮೂಹಿಕ ರಾಜೀನಾಮೆಯನ್ನು ನೀಡುತ್ತಿದ್ದೇವೆ ಎಂದರು.
ಒಂದು ಸಾಮಾನ್ಯ ಜ್ಞಾನವಿಲ್ಲದ ಮಹಿಳೆಯನ್ನ ಒಂದು ಸಂಘಟನೆಯ ಜಿಲ್ಲಾ ಅಧ್ಯಕ್ಷೆಯನ್ನಾಗಿ ಮಾಡಿದರೆ ಆ ಸಂಘಟನೆ ಮುಂದುವರಿಯಲು ಸಾಧ್ಯವ???
ಹೌದು, ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಮಹಿಳಾ ಘಟಕದಲ್ಲಿ ಇಂತಹ ಒಂದು ಪ್ರಶ್ನೆ ಇಂದು ಉದ್ಭವಿಸಿದೆ. ಇಲ್ಲಿರುವ ಮಹಿಳಾ ಸದಸ್ಯರ ಸಂಖ್ಯೆಯೂ ಕೂಡ ಬೆರಳೆಣಿಕೆಯಷ್ಟು. ಯಾವುದೇ ಒಂದು ಕಾರ್ಯಕ್ರಮ ಇಲ್ಲಿ ಆಯೋಜನೆ ಮಾಡಿದರೆ ಆ ಕಾರ್ಯಕ್ರಮ, ಈ ಹಿಂದಿನ ಮಹಿಳಾ ಜಿಲ್ಲಾಧ್ಯಕ್ಷೆ ಜ್ಯೋತಿ ಶೇರಿಗಾರ್ತಿಯ ವೈಯಕ್ತಿಕ ಲಾಭಕ್ಕಾಗಿ ಆಗಿರುತ್ತದೆ ಎಂದರು.
ಇಲ್ಲಿ ಪುರುಷ ಜಿಲ್ಲಾಧ್ಯಕ್ಷರಿದ್ದಾರೆ. ಆದರೆ ಈ ಜ್ಯೋತಿ ಸೇರಿಗಾರ್ತಿಯವರಿಗೆ ಈ ಪುರುಷ ಜಿಲ್ಲಾಧ್ಯಕ್ಷ ಆಟಕ್ಕುಂಟು ಲೆಕ್ಕಕ್ಕಿಲ್ಲ. ಈ ಜ್ಯೋತಿ ಸೇರಿಗಾರ್ತಿ ಅವರ ಯಾವುದೇ ಮಾತನ್ನು ಕೂಡ ಕೇಳುವುದಿಲ್ಲ.
ಒಂದು ಸಂಘಟನೆ ಅಂದಾಗ ಅದಕ್ಕೆ ಅದರದ್ದೇ ಆದ ರೀತಿ ನೀತಿ ನಿಯಮಗಳಿರುತ್ತವೆ. ಅವೆಲ್ಲವನ್ನ ಗಾಳಿಗೆ ತೂರಿ ಇವಳ ಲಾಭಕ್ಕೋಸ್ಕರ ಇವಳಿಗೆ ಮನಸ್ಸಿಗೆ ಬಂದ ಹಾಗೆ ನಡೆದುಕೊಳ್ಳುತ್ತಿದ್ದಾಳೆ ಎಂದರು.
ಸಂಘಟನೆ ಎಂದರೆ ಅಲ್ಲಿ ಹೋರಾಟವೇ ಪ್ರಮುಖ... ಆದರೆ ಇಲ್ಲಿ ಪ್ರಮುಖ ಏನೆಂದರೆ , ಡ್ರಮ್ಸ್ ಮಾಡೋದು, ಟ್ಯಾಬ್ಲೋ ಆಯೋಜನೆ ಮಾಡುವುದು ಅದಕ್ಕಾಗಿ ರೂ. 50 ರೂ. 100 ರೂ. 500 ರೂಪಾಯಿಯನ್ನು ಹಣ ವಸೂಲಿ ಮಾಡುವುದು ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು.
ಈ ಜ್ಯೋತಿ ಶೇರಿಗಾರ್ತಿ ತನ್ನ ಅಧ್ಯಕ್ಷೀಯ ಅವಧಿಯಲ್ಲಿ ಮಹಿಳಾ ಸದಸ್ಯರ ಬಗ್ಗೆ ಅಲ್ಲ ಸಲ್ಲದ ವಿಚಾರಗಳನ್ನು ಹೇಳಿಕೊಂಡು ಸಂಘಟನೆ ಒಡೆಯುವ ಕೆಲಸವನ್ನು ನಿರಂತರವಾಗಿ ಮಾಡಿ, ಇಂದು ಹೆಚ್ಚಿನ ಸದಸ್ಯರೂ ಪದಾಧಿಕಾರಿಗಳು ಸಂಘಟನೆ ಬಿಟ್ಟು ಹೊರಗೆ ಹೋಗುವಂತೆ ಮಾಡಿರುತ್ತಾಳೆ. ಅವಳ ಈ ದಿಸೆಯಿಂದ ಈ ಮಹಿಳಾ ಘಟಕ ಈ ದಿನ ನೆಲಕಚ್ಚಿ ಹೋಯ್ತು ಎಂದು ತಮ್ಮ ನೋವನ್ನು ಹಂಚಿಕೊಂಡರು.
ಇದೇ ಫೆಬ್ರವರಿ 25ರಂದು ಸಂಘಟನೆಯ ಪ್ರಮುಖರು ಉಡುಪಿ ಜಿಲ್ಲೆಗೆ ಭೇಟಿ ನೀಡಿ ಪದಾಧಿಕಾರಿಗಳ ಸಭೆ ನಡೆಸಿದಾಗ ನಾವೆಲ್ಲರೂ ಈ ಜ್ಯೋತಿ ಸೇರಿಗಾರ್ತಿ ಇವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುತ್ತೇವೆ. ಬಳಿಕ ಅವರು ಸಭೆಯಲ್ಲಿ ಮೇ 10 ರಂದು ಚುನಾವಣೆ ನಡೆಸುವುದಾಗಿ ಹೇಳಿ, ಉಡುಪಿ ಜಿಲ್ಲಾ ಮಹಿಳಾ ಮತ್ತು ಪುರುಷ ಘಟಕವನ್ನು ಬರ್ಕಾಸ್ತುಗೊಳಿಸಿರುತ್ತಾರೆ.
ಈ ಮಹಿಳಾ ಘಟಕ ಬರ್ಕಾಸ್ತು ಆದರೂ ಕೂಡ ಈ ಜ್ಯೋತಿ ಸೇರಿಗಾರ್ತಿ ಅವಳ ಚೇಲಾನೊಂದಿಗೆ ಸೇರಿಕೊಂಡು ಅವಳೇ ಅಧ್ಯಕ್ಷೆ ಎಂದು ವಿವಿಧ ಪೇಪರ್ ಹಾಗೂ ವೆಬ್ ಸೈಟ್ ಗಳಿಗೆ ಸುದ್ದಿಯನ್ನು ಕಳುಹಿಸಿ ಅದನ್ನು ಪ್ರಚಾರ ಮಾಡಿ ಮಾಧ್ಯಮದವರ ಜೊತೆ ಜನರನ್ನು ಕೂಡ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾಳೆ. ದಾಖಲೆಗಳನ್ನು ನೀಡಿದ್ದೇವೆ ಎಂದರು.
ಅವಳ ಇಷ್ಟೆಲ್ಲ ಲೋಪದೋಷ ಇದ್ರೂ ಕೂಡಾ ಆ ವ್ಯಕ್ತಿಗೆ ಇದೇ ಜ್ಯೋತಿ ಸೇರಿಗಾರ್ತಿ ಮತ್ತು ಅಧ್ಯಕ್ಷೆಯೇ ಆಗಿರಬೇಕು, ಅವಳೇ ಬೋಗಸ್ ಅಧ್ಯಕ್ಷೆ ಎಂದು ಅಂದ್ರೆ ಅವರೇ ಇರಲಿ. ಈ ಬಗ್ಗೆ ನಾವು ಪ್ರಶ್ನೆ ಮಾಡಿದ್ರೆ ಆ ಸಂಘಟನೆ ವ್ಯಕ್ತಿಯೊಬ್ಬ ಅವಳ ಬೆನ್ನಿಗೆ ಸದಾ ನಿಂತಿರುತ್ತಾನೆ. ಅವನೊಬ್ಬ ಅವಳ ಚೇಲಾ ಅಂತಾನೆ ಹೇಳಬೋದು.... ಮೀಟಿಂಗ್ ಕರೆಯಿರಿ ಎಂದರೆ ಅವರಿಬ್ಬರೇ ಸಭೆ ಮಾಡುತ್ತಾರೆ. ಸಂಘಟನೆಯ ಗ್ರೂಪ್ ನಲ್ಲಿ ಏನೇ ಕೇಳಿದ್ರು ಕೂಡಾ ಗ್ರೂಪ್ ಅಡ್ಮಿನ್ ಓನ್ಲಿ ಸೆಂಡ್ ಮೆಸೇಜ್ ಅನ್ನೋ ಸೆಟ್ಟಿಂಗ್ ಆನ್ ಮಾಡ್ತಾರೆ. ನಮಗೆ ಇಲ್ಲಿ ಏನೂ ಕೂಡಾ ಪ್ರಶ್ನೆ ಮಾಡಲು ಆಗಲ್ಲ... ಒಟ್ಟಿನಲ್ಲಿ ಅವನ ಅಧ್ಯಕ್ಷೆಯ ಈ ಎಲ್ಲಾ ಘಟನೆಯಿಂದ, ಬೆಳವಣಿಗೆಯಿಂದ ಬೇಸತ್ತು 15ಕ್ಕಿಂತಲೂ ಹೆಚ್ಚು ಕಾರ್ಯಕರ್ತರು ಸಂಘಟನೆಯಿಂದ ಹೊರಬರಬೇಕು ಎಂದು ತೀರ್ಮಾನ ಮಾಡಿರುತ್ತೇವೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಮೀರಾ, ಪವಿತ್ರಾ ಶೆಟ್ಟಿ, ವಿಜಯ ಶ್ರೀನಿವಾಸ್, ಮಾಧವಿ ಶೆಟ್ಟಿ, ಮಮತಾ ಉಪಸ್ಥಿತರಿದ್ದರು.
