ಉಡುಪಿ: ಬೆಹರೈನ್, ಕತಾರ್, ದುಬೈ ಮುಂತಾದ ಗಲ್ಫ್ ರಾಷ್ಟ್ರಗಳ ಕನ್ನಡಿಗರ ಮನವಿಯಂತೆ, ಯುದ್ದ ಪೀಡಿತ ಪ್ರದೇಶಗಳ ಭಾರತೀಯರನ್ನು ರಕ್ಷಿಸುವ ಬಗ್ಗೆ ಕೇಂದ್ರ ವಿದೇಶಾಂಗ ಮಂತ್ರಿ ಜೈ ಶಂಕರ್ ಅವರನ್ನು ಸಂಸದ ಡಾ. ಮಂಜುನಾಥ್ ಅವರ ಜೊತೆ ಸಂಸತ್ ನಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಭೇಟಿಯಾಗಿ ಮಾತುಕತೆ ನಡೆಸಿದರು.
ಜೈ ಶಂಕರ್ ಅವರಂತಹ ಪ್ರತಿಭಾವಂತ ಮಂತ್ರಿ ಭಾರತೀಯರ ರಕ್ಷಣೆಗೆ ಶ್ರಮಿಸುತ್ತಿರುವುದು ಅರ್ಥವಾಯಿತು. ಆ ಪ್ರದೇಶದ ವಿಮಾನ ನಿಲ್ದಾಣದ ಮೇಲೆ ದಾಳಿಯಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಪ್ರಯತ್ನಗಳಾಗುತ್ತಿವೆ, ಆತಂಕ ಬೇಡ ಎಂದು ಭರವಸೆ ನೀಡಿದ್ದಾರೆ. ಮತ್ತು ಯಾವುದೇ ಹಂತದಲ್ಲೂ ಸಮಸ್ತ ಭಾರತೀಯರ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು ಎಂದು ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
