ಉಡುಪಿ: ಪಾಶ್ಚಾತ್ಯ ಸಂಸ್ಕೃತಿಯ ಪ್ರೇಮಿಗಳ ದಿನವನ್ನು ಯಾರೂ ಆಚರಿಸಬೇಡಿ: ಪ್ರೇಮಿಗಳಿಗೆ ಶ್ರೀರಾಮಸೇನೆ ಕಿವಿಮಾತು

ಸಾಂದರ್ಭಿಕ ಚಿತ್ರ


ಉಡುಪಿ: ಪ್ರತೀ ವರ್ಷ ಫೆಬ್ರವರಿ 14 ರಂದು ಭಾರತೀಯರು ಮರೆಯಲಾಗದ ದಿನ.

ಫೆಬ್ರವರಿ 14 ರ 2019 ರಂದು ಜಮ್ಮು - ಶ್ರೀನಗರದಲ್ಲಿ 40 ಜನ ನಮ್ಮ ವೀರಯೋಧರು ಹುತಾತ್ಮರಾದರು. ಆ ನೋವು ಇನ್ನೂ ನಮ್ಮ ಹೃದಯದಲ್ಲಿದೆ.

ದೇಶಕ್ಕಾಗಿ ಹುತಾತ್ಮರಾದ ನಮ್ಮ ಭಾರತಾಂಬೆಯ ಪುತ್ರರನ್ನು ಗೌರವಿಸಬೇಕೇ ಹೊರತು, ಗುಲಾಬಿ ಹೂವನ್ನಲ್ಲ.

ಪಾಶ್ಚಾತ್ಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪ್ರೇಮಿಗಳ ದಿನವನ್ನು ( ಫೆಬ್ರವರಿ 14) ಯಾರು ಸಹ ಆಚರಿಸಬೇಡಿ.

ಆ ದಿನ ನಮ್ಮ ಹುತಾತ್ಮರಾದ ಯೋಧರಿಗಾಗಿ ಪ್ರಾರ್ಥಿಸೋಣ,

ಪ್ರೇಮಿಗಳು ಅಂದು ಪಾರ್ಕ್, ಮಾಲ್, ಪ್ರೇಕ್ಷಣೀಯ ಹಾಗೂ ಇನ್ನಿತರರ ಸ್ಥಳಗಳಲ್ಲಿ ಅಸಭ್ಯವಾಗಿ ಕಂಡುಬಂದಲ್ಲಿ, ಅದನ್ನು ಶ್ರೀರಾಮಸೇನೆಯು ಗಂಭೀರವಾಗಿ ಪರಿಗಣಿಸಿ, ಅಂತಹ ಪ್ರೇಮಿಗಳಿಗೆ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರಯೋಧರ ಬಗ್ಗೆ ಮಾಹಿತಿ ನೀಡುತ್ತೇವೆ.

ಅದರಂತೆ ಸ್ಥಳೀಯ ಆರಕ್ಷಕ ಠಾಣೆ ಹಾಗೂ ಪೊಲೀಸ್ ಹಿರಿಯ ಅಧಿಕಾರಿಯವರಿಗೆ ಮತ್ತು ಪ್ರೇಮಿಗಳ ಹೆತ್ತವರಿಗೆ ಮಾಹಿತಿ ನೀಡಲಾಗುವುದು ಎಂದು ಶ್ರೀರಾಮಸೇನೆಯ ಮಂಗಳೂರು ವಿಭಾಗ ಅಧ್ಯಕ್ಷ ಜಯರಾಂ ಅಂಬೆಕಲ್ಲು ಪ್ರೇಮಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ.