ಬ್ರಹ್ಮಾವರ: ದ್ವೇಷ ಭಾಷಣ ಪ್ರಕರಣ: ಇಬ್ಬರ ಬಂಧನ

ಬ್ರಹ್ಮಾವರ: ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಹರಡುವ ಪೋಸ್ಟ್ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ
ದಾಖಲಾದ ಅಪರಾಧ ಕ್ರಮಾಂಕ 19/2026 ಕಲಂ. 196(1), 353(2) ಜೊತೆಗೆ 3(5) ಭಾರತೀಯ ನ್ಯಾಯ ಸಂಹಿತೆ  ಪ್ರಕರಣದಲ್ಲಿ  ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸಂತೋಷ ಕುಮಾರ್‌ ಶೆಟ್ಟಿ(56) ಮತ್ತು  ಕೆ. ನಾಗರಾಜ(62) ಬಂಧಿತರು.

ಪ್ರಭು ಡಿ.ಟಿ ಮತ್ತು ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ ಅವರ ಮಾರ್ಗದರ್ಶನದಲ್ಲಿ ಪೊಲೀಸ್‌ ಉಪ ನಿರೀಕ್ಷಕ ಅಶೋಕ ಮಾಳಾಬಗಿ, ಸುದರ್ಶನ್‌ ದೊಡಮನಿ ಹಾಗೂ ಠಾಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.