ಪ್ರಜಾಪ್ರಭುತ್ವ ಉಳಿಸಲು , ಸಂವಿಧಾನವನ್ನು ಕಾಪಾಡಲು ಸಂಘಟಿತ ಹೋರಾಟ ಆಗತ್ಯ : SDPI ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ



ದೊಡ್ಡಬಳ್ಳಾಪುರ:ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ SDPI ದೊಡ್ಡಬಳ್ಳಾಪುರ, ಕ್ಷೇತ್ರ ಸಮಿತಿಯ ವತಿಯಿಂದ, ಪಕ್ಷದ ಕಚೇರಿ ಹತ್ತಿರ ಆಯೋಜಿಸಲಾಗಿದ್ದ 77 ನೆಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಪಕ್ಷದ ಮುಖಂಡರು ಮಾತನಾಡಿದರು, ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ ಮತ್ತು ನ್ಯಾಯವನ್ನು ಒದಗಿಸುವುದು ನಮ್ಮ ಸಂವಿಧಾನ.



ಧ್ವಜಾರೋಹಣ ಮಾಡಿ ಸಂಭ್ರಮಿಸುತ್ತಿದ್ದರೂ, ದೇಶದ ಸಂವಿಧಾನಾತ್ಮಕ ಮೌಲ್ಯಗಳು ತೀವ್ರ ಸವಾಲಿನ ಎದುರಿನಲ್ಲಿವೆ ಎಂಬ ಕಠಿಣ ಸತ್ಯವನ್ನು ಮರೆತರೆ ಆಗುವುದಿಲ್ಲ.

ಗಣರಾಜ್ಯೋತ್ಸವ ಕೇವಲ ಸಮಾರಂಭವಲ್ಲ, ಅದು ಅಧಿಕಾರಕ್ಕೆ ಜನರ ಎಚ್ಚರಿಕೆಯ ಸಂದೇಶ.ಭಾರತದ ಸಂವಿಧಾನವು ಈ ದೇಶದ ಪ್ರತಿಯೊಬ್ಬ ನಾಗರಿಕನಿಗೆ ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಮಾನವ ಗೌರವವನ್ನು ಭರವಸೆ ನೀಡಿದೆ. ಆದರೆ ಇಂದು,ಸಂವಿಧಾನವನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ.

ಪ್ರಜಾಪ್ರಭುತ್ವದ ಸಂಸ್ಥೆಗಳ ದುರ್ಬಳಕೆ ಆಗುತ್ತಿದೆ ( ಉದಾ:- ಚುನಾವಣಾ ಆಯೋಗ, ED, CBI, NIA) ,ಮತದಾನದ ಹಕ್ಕು ಪ್ರಶ್ನೆಗೆ ಒಳಗಾಗುತ್ತಿದೆ (SIR) ಬಡವರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರು ವ್ಯವಸ್ಥಿತವಾಗಿ ಅಂಚಿಗೆ ತಳ್ಳಲ್ಪಡುತ್ತಿದ್ದಾರೆ (ಬುಲ್ದೊಜರ್ ನ್ಯಾಯ)ಇದು ಗಣರಾಜ್ಯಕ್ಕೆ ಅಪಾಯಕಾರಿ ಸೂಚನೆ.



SDPI ಈ ಅಸಮಾನತೆ ಮತ್ತು ಅನ್ಯಾಯದ ರಾಜಕಾರಣದ ವಿರುದ್ಧ ಜನರ ಧ್ವನಿಯಾಗಿ ನಿಂತಿದೆ.

ನಾವು ಹೇಳುತ್ತೇವೆ ಸ್ಪಷ್ಟವಾಗಿ — ಸಂವಿಧಾನ ವಿರೋಧಿ ಯಾವುದೇ ನೀತಿ, ಯಾವುದೇ ಕ್ರಮ, ಯಾವುದೇ ದಮನವನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಅಧಿಕಾರದಲ್ಲಿರುವವರು ಸಂವಿಧಾನದ ಹೆಸರಿನಲ್ಲಿ ದೇಶವನ್ನು ನಡೆಸಬೇಕು — ತಮ್ಮ ರಾಜಕೀಯ ಅಜೆಂಡಾಗಳಿಗಾಗಿ ಸಂವಿಧಾನವನ್ನು ಬಳಸಬಾರದು.

ವಿಭಜನೆಯ ರಾಜಕಾರಣದಿಂದ ದೇಶವನ್ನು ಆಡಲು ಸಾಧ್ಯವಿಲ್ಲ.ಭಯದ ಮೂಲಕ ಆಡಳಿತ ನಡೆಸಲು ಸಾಧ್ಯವಿಲ್ಲ

ಈ ಗಣರಾಜ್ಯೋತ್ಸವದಂದು ನಾವು ಜನತೆಗೆ ಸ್ಪಷ್ಟವಾಗಿ ಕರೆ ನೀಡುತ್ತೇವೆ:ನಿಮ್ಮ ಮತದಾನದ ಹಕ್ಕನ್ನು ಕಾಪಾಡಿಕೊಳ್ಳಿ. ಸಂವಿಧಾನವನ್ನು ನಿಮ್ಮ ರಕ್ಷಣಾ ಕವಚವಾಗಿ ರೂಪಿಸಿಕೊಳ್ಳಿ.ಅನ್ಯಾಯದ ವಿರುದ್ಧ ಮೌನವಾಗಿರಬೇಡಿ.

ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಪ್ರತಿಯೊಂದು ಪ್ರಯತ್ನದ ವಿರುದ್ಧ ಸಂಘಟಿತರಾಗಿ ನಿಲ್ಲಿ.ಜನಶಕ್ತಿ ಮಾತ್ರ ಅಧಿಕಾರಕ್ಕೆ ಉತ್ತರ ನೀಡಬಲ್ಲದು.

ಸಂಘಟಿತ ಜನತೆ ಮಾತ್ರ ಈ ದೇಶವನ್ನು ನ್ಯಾಯಯುತ ದಿಕ್ಕಿನಲ್ಲಿ ಮುನ್ನಡೆಸಬಲ್ಲದು.

SDPI ಪಕ್ಷವು ರಸ್ತೆಯಿಂದ ವಿಧಾನಸಭೆಯವರೆಗೆ, ಜನರ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸುತ್ತದೆ.

ನಾವು ಹೋರಾಟ ನಿಲ್ಲಿಸುವುದಿಲ್ಲ.

ನಾವು ಮೌನವಾಗುವುದಿಲ್ಲ.

ನಾವು ಸಂವಿಧಾನವನ್ನು ಬಿಟ್ಟುಕೊಡುವುದಿಲ್ಲ.

ಈ ಗಣರಾಜ್ಯೋತ್ಸವದಂದು, ಸಂವಿಧಾನ ರಕ್ಷಣೆ ನಮ್ಮ ಹೋರಾಟ — ಪ್ರಜಾಪ್ರಭುತ್ವ ಉಳಿಸುವುದು ನಮ್ಮ ಸಂಕಲ್ಪ ಎಂಬ ಘೋಷಣೆಯೊಂದಿಗೆ, ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ಜೈ ಸಂವಿಧಾನ!

ಜೈ ಜನತಂತ್ರ!

ಜೈ ಭಾರತ!