ಶಂಕರಪುರ: ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಮಾರ್ಗದರ್ಶನದಲ್ಲಿ ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ಹಾಗೂ ಶ್ರೀ ಕ್ಷೇತ್ರ ಶಂಕರಪುರ ಉಡುಪಿ ಜಿಲ್ಲೆ ಸಹಭಾಗಿತ್ವದಲ್ಲಿ 2026 ಜನವರಿ 01 ರಿಂದ 14 ರ ತನಕ ಉಡುಪಿ, ಮಂಗಳೂರು ಹೆದ್ದಾರಿಯಾಗಿ ಶಬರಿಮಲೆ ಯಾತ್ರೆ ಮಾಡುವ ಅಯ್ಯಪ್ಪ ಸ್ವಾಮಿ ವ್ರತಧಾರಿಗಳಿಗೆ ಅನ್ನದಾನ ಸೇವೆ ಹಾಗೂ ವಿಶ್ರಾಂತಿಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕಾಪು ಸಮೀಪದ ಪಾಂಗಳ ಸೇತುವೆಯ ಬಳಿ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿದೆ.
