ಶಂಕರಪುರ: ಸಾಯಿಮುಖ್ಯಪ್ರಾಣ ಕಾಲಭೈರವ ದೇವಸ್ಥಾನ - ಶಿಲಾಮೂರ್ತಿ ಪ್ರತಿಷ್ಠೆಯ ನಿಧಿ ಕುಂಭ ಸ್ಥಾಪನೆ



ಕಟಪಾಡಿ: ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿಮುಖ್ಯಪ್ರಾಣ ಕಾಲಭೈರವ ದೇವಸ್ಥಾನದಲ್ಲಿ ನೂತನವಾಗಿ ಪ್ರತಿಷ್ಠಾಪಿಸಲ್ಪಡುವ ಶ್ರೀ ಮುಖ್ಯಪ್ರಾಣ ದೇವರ 19 ಅಡಿ ಎತ್ತರದ ಶಿಲಾಮೂರ್ತಿ ಪ್ರತಿಷ್ಠೆಯ ಪ್ರಯುಕ್ತ ದ್ವಾರಕಾಮಾಯಿ ಮಠದ ಏಕಜಾತಿ ಧರ್ಮ ಪೀಠದ ಶ್ರೀ ಸಾಯಿ ಈಶ್ವರ್‌ಗುರೂಜಿ ಉಪಸ್ಥಿತಿಯಲ್ಲಿ ನಿಧಿ ಕುಂಭ ಸ್ಥಾಪನೆಯು ನ.30ರಂದು ಜರಗಿತು.



ಮಂಗಳೂರು ಶ್ರೀ ಆದಿಶಕ್ತಿ ಭುವನೇಶ್ವರೀ ಆದಿನಾಥ ಸಿದ್ದಿ ಪೀಠದ ಶ್ರೀ ಪ್ರವೀಣ್ ರಾಜ್ ಮಚ್ಚೇಂದ್ರನಾಥ್ ಬಾಬಾ, ಮೈಸೂರು ಪರಮಹಂಸದ ಗುರುದೇವ ಗುರುಮನೆ ಗೋಪಾಲಪುರ ಓಂ ಶಿವಾ ರುಚಿಟ್ರಂಬಲಂ ಗುರುವೇ ಶರಣಂ ಅವಧೂತ ರಾಜಗುರುವೇಲ್, ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನ್ ದಾಸ್ ಸ್ವಾಮೀಜಿ, ಕಿಷ್ಕಂದ ಹನುಮಬೆಟ್ಟ ಆಂಜನೇಯ ಜನ್ಮಸ್ಥಳದ ಅಂಜನಾದ್ರಿಯ ಪ್ರಧಾನರಾದ ಮಹಾಂತ ವಿದ್ಯಾದಾಸ್ ಬಾಬಾ, ಕುಷ್ಟಗಿ ಬಾಲ ಆಂಜನೇಯ ದೇವಸ್ಥಾನದ ಮುಖ್ಯಸ್ಥ ಹನುಮಾನ್ ದಾಸ್ ತ್ಯಾಗಿ ಬಾಬಾ, ತಂತ್ರಿಗಳಾದ ದೇವದಾಸ್ ತಂತ್ರಿ ಅವರು ಧಾರ್ಮಿಕ ಪೂಜಾ ಪ್ರಕ್ರಿಯೆ ನೆರವೇರಿಸಿದರು. ಈ ಸಂದರ್ಭ ಪ್ರಮುಖರಾದ ಸ್ಮಿತಾ ಪ್ರವೀಣ್, ಕಿರಣ್ ಜೋಗಿ, ರಾಮ ಪೂಜಾರಿ, ಗೀತಾಂಜಲಿ ಎಂ. ಸುವರ್ಣ, ಸತೀಶ್ ದೇವಾಡಿಗ, ರಾಘವೇಂದ್ರ ಅಮೀನ್, ಅಭಿರಾಜ್ ಎಂ. ಸುವರ್ಣ, ವೀಣಾ ಶೆಟ್ಟಿ, ಅಖಿಲೇಶ್‌, ಲಾವಣ್ಯ ವಿನೋದ್, ಅನುರಾಧಾ ಸಂತೋಷ್, ಸುನಿಲ್ ಕೆ.ಆರ್., ಗಣೇಶ್ ಪೂಜಾರಿ ಬಜಗೋಳಿ, ಸುಷ್ಮಾ ಉಮೇಶ್ ಪುತ್ರನ್, ರೇಷ್ಮಾ ಹೆಗ್ಡೆ, ಶ್ವೇತಾ ಜಯರಾಮ್ ಶೆಟ್ಟಿಗಾ‌ರ್, ಸುವರ್ಣ ಮಲ್ಲಿಕಾರ್ಜುನ, ವಿಜಯ ಕುಂದರ್, ಎಮ್.ಎಸ್. ಪ್ರಸನ್ನ ಕುಮಾರ್, ಶಿವ್ ದಾಸ್, ಶಿಲ್ಪಾ ಮಹೇಶ್ ಜತ್ತನ್, ಹರೀಶ್ ಮಯ್ಯ ಉಪಸ್ಥಿತರಿದ್ದರು.