ಪ್ರಮೋದ್ ಮದ್ವರಾಜ್ ಅವರಿಗೆ ಆದ ಅವಮಾನಕ್ಕೆ ತಿಂಗಳೆ ಬೇಸರ : ಕುತಂತ್ರ ನಡೆಸಿದವರಿಗೆ ಜನರೇ ಉತ್ತರ ನೀಡಲಿದ್ದಾರೆ"

ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ

ಉಡುಪಿ: ಜಿಲ್ಲೆಯ ಮೇರು ರಾಜಕಾರಣಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡದಂತೆ ಕುತಂತ್ರ ನಡೆಸಿದವರಿಗೆ ಜನರೇ ಉತ್ತರ ನೀಡಲಿದ್ದಾರೆ ಎಂದು ಬಿಜೆಪಿ ಮುಖಂಡ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

2018 ರಿಂದ ನಮ್ಮನ್ನು ಕಡೆಗಣಿಸಲಾಗುತ್ತಿದೆ. ತಾಯಿ ಭಾರತಿಯ ಸೇವೆಯಲ್ಲಿ ಇದೆಲ್ಲವನ್ನು ಮರೆತು ಪಕ್ಷಕ್ಕಾಗಿ ದುಡಿಯುತ್ತಿದ್ದೇವೆ. ಆದರೆ ಮಾಜಿ ಸಚಿವರೂ, ಕನಕನ ಕಿಂಡಿಗೆ ಸ್ವರ್ಣಲೇಪನ ಮಾಡಿಸಿದ ಪ್ರಮೋದ್ ಮಧ್ವರಾಜ್ ಅವರಿಗೂ ಮೋದಿಯವರನ್ನು ಭೇಟಿಯಾಗಲು ಅವಕಾಶ ಕಲ್ಪಿಸದೇ ಇರುವುದು ವಿಪರ್ಯಾಸವೇ ಸರಿ. 

ಬೋಳ ಪ್ರಭಾಕರ್ ಕಾಮತ್ ಅವರಂತಹ ಹಿರಿಯರಿಗೆ ಅವಕಾಶ ನೀಡಿರುವುದು ಸಂತಸ. ಅದರ ಜೊತೆಗೆ ಇನ್ನು ಅನೇಕ ಹಿರಿಯರು ಇದ್ದರು. ಅವರನ್ನು ಪರಿಗಣಿಸದೇ ಇರುವುದು ಸಖ್ಯವಲ್ಲ. 

ಅಂತೆಯೇ ಪ್ರಮೋದ್ ಮಧ್ವರಾಜ್ ಅವರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವ ಜವಾಬ್ದಾರಿ ಜಿಲ್ಲಾಧ್ಯಕ್ಷರು, ಸಂಸದರು, ಶಾಸಕರು ಗಮನಹರಿಸಬಹುದಿತ್ತು. ಇದರಲ್ಲಿ ಶ್ರೀ ಮಠದ ಹೊಣೆಗಾರಿಕೆಯೂ ಇತ್ತು. ಮುಂದೆ ಇಂತಹ ಅಚಾರ್ತುಗಳು ನಡೆಯದೇ ಇರಲಿ ಎಂದಿದ್ದಾರೆ.