ಉಡುಪಿ: ದ್ವೇಷ ಭಾಷಣದ ಹಿನ್ನೆಲೆಯಲ್ಲಿ ನಿನ್ನೆ ಬಂಧನಕ್ಕೆ ಒಳಗಾಗಿದ್ದ ಹಿಂದೂ ಜಾಗರಣ ವೇದಿಕೆ ಮುಖಂಡ ರತ್ನಾಕರ ಅಮೀನ್ ಗೆ ಇಂದು ಜಾಮೀನು ಮಂಜೂರಾಗಿದೆ.
ಜಾಮೀನು ಮಂಜೂರುಗೊಳಿಸಿ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ.
ರತ್ನಾಕರ್ ಅಮೀನ್ ಪರವಾಗಿ ಹಿರಿಯ ನ್ಯಾಯವಾದಿ ಮಟ್ಟಾರ್ ರತ್ನಾಕರ್ ಹೆಗ್ಡೆ ವಾದ ಮಂಡನೆ ಮಾಡಿದ್ದರು.
ಎರಡು ದಿನಗಳ ಹಿಂದೆ ಉಡುಪಿಯಲ್ಲಿ ನಡೆದಿದ್ದ ಪ್ರತಿಭಟನೆ ಸಂದರ್ಭ ರತ್ನಾಕರ ಅಮೀನ್ ದ್ವೇಷ ಭಾಷಣ ಮಾಡಿದ್ದರು ಎಂಬ ಆರೋಪದಲ್ಲಿ ನಗರ ಠಾಣೆಯಲ್ಲಿ ಅವರ ವಿರುದ್ಧ ಸುಮೊಟೋ ಕೇಸ್ ದಾಖಲಾಗಿತ್ತು. ನಿನ್ನ ಪೊಲೀಸರು ಅವರನ್ನು ಬಂಧಿಸಿದ್ದರು.
