ಉಡುಪಿ ಮೂಲದ ಖ್ಯಾತ ಖಳನಟ ಹರೀಶ್ ರಾಯ್ ನಿಧನ

ಹರೀಶ್ ರಾಯ್

ಬೆಂಗಳೂರು: ‘ಓಂ’, ‘ನಲ್ಲ’ ಇತ್ತೀಚೆಗಿನ ಬ್ಲಾಕ್ ಬಸ್ಟರ್ ‘ಕೆಜಿಎಫ್’, ‘ಕೆಜಿಎಫ್ 2’ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ಖಳನಟ ಹರೀಶ್ ರಾಯ್ ಅವರು ಇಂದು ನಿಧನ ಹೊಂದಿದ್ದಾರೆ. ಹರೀಶ್ ರಾಯ್ ಅವರು ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಚಿಕಿತ್ಸೆಗಾಗಿ ಹಲವು ನಟ-ನಟಿಯರು ಆರ್ಥಿಕ ಸಹಾಯ ಮಾಡಿದ್ದರು.

 ಅನಾರೋಗ್ಯದೊಂದಿಗೆ ಸತತ ಹೋರಾಟ ಮಾಡುತ್ತಲೇ ಇದ್ದ ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹರೀಶ್ ರಾಯ್ ಉಡುಪಿ ಮೂಲದವರು. ನೋವೆಲ್ಟಿ ಜ್ಯುವೆಲರಿ ಕುಟುಂಬಕ್ಕೆ ಸೇರಿದ ಅವರು ,ಚಿತ್ರರಂಗವನ್ನೇ ನಂಬಿ ಬೆಂಗಳೂರಿನಲ್ಲಿ ವಾಸವಾಗಿದ್ದರು.  ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ನಟ ಯಶ್ ಸೇರಿದಂತೆ ಇನ್ನೂ ಹಲವರು  ಆರ್ಥಿಕ ಸಹಾಯ ಮಾಡಿದ್ದರು. ಆದರೆ ಅಂತಿಮವಾಗಿ ಹರೀಶ್ ಅವರು ಇಂದು ನಿಧನ ಹೊಂದಿದ್ದಾರೆ.