ಭಿನ್ನ ಸಾಮರ್ಥ್ಯದ ಮಕ್ಕಳ ಅಥ್ಲೆಟಿಕ್ಸ್ : ನೂರುಲ್ ಫುರ್ ಖಾನ್ ಶಾಲೆಗೆ ಚಿನ್ನ - ಬೆಳ್ಳಿ ಪದಕ : ದಿಲ್ ದಾರ್ ಫಜಲುರ್ ರಹಿಮಾನ್ ಅವರ ವಿಶೇಷ ಸೇವೆಗಾಗಿ ಸನ್ಮಾನ



ಮಂಗಳೂರು ವಿಶ್ವವಿದ್ಯಾನಿಲಯ, ಡಾ.ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿ, ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಹಾಗೂ ಕರ್ನಾಟಕ ಉಡುಪಿ ಜಿಲ್ಲಾ ವಿಶೇಷ ಶಿಕ್ಷಕ/ಶಿಕ್ಷಕೇತರರ ಸಂಘದ ವತಿಯಿಂದ ಸಂಸ್ಥಾಪಕಿ ಹಾಗೂ ಪ್ರಾಂಶುಪಾಲರಾದ ದಿಲ್ ದಾರ್ ಫಝಲುರ್  ರಹಿಮಾನ್ ರನ್ನು ವಿಶೇಷ ಕುಸುಮಗಳಿಗೆ ಮಾಡಿರುವಂತಹ ಅವರ ವಿಶೇಷ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಪಝಲುರ್ ರಹಿಮಾನ್ ಅವರಿಗೆ ಸನ್ಮಾನ




ಉಡುಪಿ ಅಜ್ಜರಕಾಡು ಮೈದಾನದಲ್ಲಿ ನಡೆದ  ಜಿಲ್ಲಾ ಮಟ್ಟದ ಭಿನ್ನ ಸಾಮರ್ಥ್ಯದ ಮಕ್ಕಳ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ  ನೂರುಲ್ ಫುರ್ ಖಾನ್ ವಿಶೇಷ ಶಾಲೆಯ ಮಕ್ಕಳು ಪಥ ಸಂಚಲನದಲ್ಲಿ ಹಾಗೂ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ, 7 ಚಿನ್ನದ ಪದಕ, 2 ಬೆಳ್ಳಿ ಪದಕ  ಮತ್ತು 8 ಕಂಚಿನ ಪದಕಗಳನ್ನು ಪಡೆದು ನೂರುಲ್ ಫುರ್ ಖಾನ್ ಶಾಲೆಗೆ ಕೀರ್ತಿ ತಂದಿರುತ್ತಾರೆ. 



ಸಮಾರಂಭದಲ್ಲಿ ರೆಡ್ ಕ್ರಾಸ್' ಸಂಸ್ಥೆಯ ಅಧ್ಯಕ್ಷರು, ಬಸ್ರೂರು ರಾಜೀವ್ ರೆಟ್ಟಿ, ಪ್ರಾಂಶುಪಾಲರಾದ ಸೋಜನ್ , ಕ್ರೀಡಾ ನಿರ್ದೇಶಕರಾದ ರಾಮಚಂದ್ರ ಪಾಟ್ಕರ್, ಶಾಸಕರಾದ ಯಶ್ಪಾಲ್ ಸುವರ್ಣ, ನಿರ್ದೇಶನಾಲಯದ ಯೋಜನಾ ನಿರ್ದೇಶಕರು ಅಲಿಯಾ ಮತ್ತಿತರರು  ಉಪಸ್ಥಿತರಿದ್ದರು.