ಕುಂದಾಪುರ: ಬೀದಿ ವ್ಯಾಪಾರಿಗಳ ಸಮಸ್ಯೆ ಬಗೆಹರಿಸಿ- ಮೊಳಹಳ್ಳಿ ದಿನೇಶ್ ಹೆಗ್ಡೆಯವರಿಂದ ಪೌರಾಡಳಿತ ಸಚಿವ ರಹಿಂ ಖಾನ್ ಗೆ ಮನವಿ

ಸಚಿವರಿಗೆ ಮನವಿ

ಕುಂದಾಪುರ: ಕಾಂಗ್ರೆಸ್ ನಾಯಕ ಮೊಳಹಳ್ಳಿ ದಿನೇಶ್ ಹೆಗ್ಡೆಯವರು ಪೌರಾಡಳಿತ ಸಚಿವ ರಹಿಂ ಖಾನ್ ರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ, ಕುಂದಾಪುರದ ಬೀದಿ ವ್ಯಾಪಾರಿಗಳಿಗೆ ಆಗುತ್ತಿರುವ ತೊಂದರೆಗಳ ಕುರಿತು ವಿವರಿಸಿದರು. 

ಬೀದಿ ವ್ಯಾಪಾರಿಗಳು ಜೀವನೋಪಾಯ ಕಳೆದುಕೊಳ್ಳದಂತೆ ಅವರಿಗೆ ಬದಲಿ ವ್ಯವಸ್ಥೆ ಕಲ್ಪಿಸುವಂತೆ ಸಚಿವರಿಗೆ ಮನವಿ ಮಾಡಿದರು.

ಮೊಳಹಳ್ಳಿ ದಿನೇಶ್ ಹೆಗ್ಡೆ ಮನವಿ ಆಲಿಸಿದ ಪೌರಾಡಳಿತ ಸಚಿವ ರಹಿಂ ಖಾನ್ ಕುಂದಾಪುರ ಪುರಸಭಾ ಮುಖ್ಯಾಧಿಕಾರಿ ಆನಂದ ಜೆ. ಇವರಿಗೆ ದೂರವಾಣಿ ಕರೆ ಮಾಡಿ ಬೀದಿ ವ್ಯಾಪಾರಿಗಳ ಸಮಸ್ಯೆಯನ್ನು ಅತಿ ಶೀಘ್ರದಲ್ಲಿ ಬಗೆಹರಿಸುವಂತೆ ಹಾಗೂ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿ ಕೊಡುವಂತೆ ಸೂಚನೆಗಳನ್ನು ನೀಡಿದರು.