ಸುರಕ್ಷಾ ಸುವರ್ಣಗೆ ಪಿಎಚ್.ಡಿ ಪ್ರದಾನ

ಸುರಕ್ಷಾ ಸುವರ್ಣ

ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಮಣಿಪಾಲದ 33ನೇ ಘಟಿಕೋತ್ಸವದಲ್ಲಿ ಸುರಕ್ಷಾ ಸುವರ್ಣ ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ (ಪಿಎಚ್.ಡಿ) ಪದವಿ ಪ್ರದಾನ ಮಾಡಲಾಯಿತು.

ಅವರು ಮಣಿಪಾಲ ವಾಣಿಜ್ಯ ಮತ್ತು ಆರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಸತೀಶ್ ಕುಮಾರ್ ಮಾರ್ಗದರ್ಶನದಲ್ಲಿ 'ಸ್ತ್ರೀ ಸಬಲೀಕರಣ, ಗ್ರಹಿತ ಸಾಮಾಜಿಕ ಬೆಂಬಲ ಮತ್ತು ಗ್ರಹಿತ ಆರೋಗ್ಯ ಜೀವನ ತೃಪ್ತಿಯ ಪೂರ್ವ ಸೂಚಕಗಳಾಗಿ: ಸ್ವಯಂ ಸಹಾಯ ಗುಂಪುಗಳ ಅಂಶಾಧಾರಿತ ಅಧ್ಯಯನ' ಎಂಬ ಮಹಾಪ್ರಬಂಧ ಮಂಡಿಸಿದ್ದರು.

ಈ ಮಹಾಪ್ರಬಂಧ ಮಹಿಳಾ ಸಬಲೀಕರಣ, ಸಾಮಾಜಿಕ ಬೆಂಬಲ ಮತ್ತು ಆರೋಗ್ಯದ ಗ್ರಹಿಕೆಗಳು ಸ್ವಯಂ ಸಹಾಯ ಗುಂಪುಗಳ ಸದಸ್ಯರ ಜೀವನ ತೃಪ್ತಿಗೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ವಿಶ್ಲೇಷಿಸುತ್ತದೆ.

ಸುರಕ್ಷಾ ಸುವರ್ಣ ಅವರು ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಸಹ ಪ್ರಾಧ್ಯಾಪಕ ಡಾ. ನವೀನ್ ಕುಮಾರ್ ಕೂಡಮರ ಅವರ ಪತ್ನಿ ಹಾಗೂ ಸುಧಾಕರ ಸುವರ್ಣ ಮತ್ತು ಪುಷ್ಪ ಗುಂಡಿಬೈಲು ದಂಪತಿ ಪುತ್ರಿ.