ಉಡುಪಿ: ಪ್ರಚೋದನಕಾರಿ ಭಾಷಣ - ಹಿಂದೂ ಜಾಗರಣ ವೇದಿಕೆ ಮುಖಂಡ ರತ್ನಾಕರ್ ಅಮೀನ್ ಬಂಧನ

ಬಂಧಿತ ರತ್ನಾಕರ್ ಅಮೀನ್


ಉಡುಪಿ: ದೆಹಲಿ ಸ್ಪೋಟ ಖಂಡಿಸಿ ಪ್ರತಿಭಟನೆ ನಡೆಸುವಾಗ ಪ್ರಚೋದನಕಾರಿ ಭಾಷಣ ಮಾಡಿದ್ದ ಹಿಂದೂ ಜಾಗರಣ ವೇದಿಕೆ ಮುಖಂಡನನ್ನು ಬಂಧಿಸಲಾಗಿದೆ. ಕಾರ್ಕಳದ ಅಜೆಕಾರಿನ ರತ್ನಾಕರ್ ಅಮೀನ್ ಬಂಧಿತ ಮುಖಂಡ.

ದೆಹಲಿ ಸ್ಪೋಟ ಖಂಡಿಸಿ ಉಡುಪಿಯಲ್ಲಿ ಪ್ರತಿಭಟನೆ ನಡೆದಿತ್ತು. ಹಿಂದೂ ಜಾಗರಣ ವೇದಿಕೆ ಈ ಪ್ರತಿಭಟನೆ ಆಯೋಜನೆ ಮಾಡಿತ್ತು.ಈ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಹೇಳಿಕೆ  ನೀಡಿರುವ ಆರೋಪದಲ್ಲಿ  ಅವರನ್ನು ಬಂಧಿಸಲಾಗಿದೆ.

ಮದರಸ ಹಾಗೂ ಮಸೀದಿಯಲ್ಲಿ ಹಿಂದುಗಳ ಹತ್ಯೆಗೆ ಪ್ರಚೋದನೆ ನೀಡಲಾಗುತ್ತಿದೆ ಎಂದು ರತ್ನಾಕರ್ ಅಮೀನ್ ಹೇಳಿದ್ದರು.ಇದು ಸಮಾಜದಲ್ಲಿ ದ್ವೇಷ ಅಸೂಯೆ ಉಂಟುಮಾಡುವ ಹೇಳಿಕೆ ಎಂಬ ನೆಲೆಯಲ್ಲಿ ಉಡುಪಿ ನಗರ ಠಾಣೆಯಲ್ಲಿ ರತ್ನಾಕರ್ ಮೇಲೆ ಸೂಮೊಟೋ ಪ್ರಕರಣ ದಾಖಲಾಗಿತ್ತು.