ಮಣಿಪಾಲ: ಮಣಿಪಾಲ ಈಶ್ವರನಗರ Dee Tee ಬಾರ್ & ರೆಸ್ಟೋರೆಂಟ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ತಂಡಗಳ ನಡುವೆ ಮಾರಾಮಾರಿ ನಡೆದಿದ್ದು ಈ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಅಮರ್ ಶೆಟ್ಟಿ, ಚಂದನ್ ಸಿ ಸಾಲ್ಯಾನ್, ಧನುಷ್, ಅಜಯ್ ಬಂಧಿತರು.ಬಾರ್ ನಲ್ಲಿ ಅಮರ್ ಶೆಟ್ಟಿ, ಧನುಷ್, ನಿತೇಶ್, ಸುಜನ್, ನಿನಾದ್ ಅಜಯ್ ಊಟ ಮಾಡುತ್ತಿರುವಾಗ ಚಂದನ್ ಎಂಬಾತನ ಕೈ ಅಮರ್ ಶೆಟ್ಟಿಯ ಮೈಗೆ ತಾಗಿದೆ.ಈ ಕ್ಷುಲ್ಲಕ ವಿಚಾರದಲ್ಲಿ ರಸ್ತೆಯಲ್ಲೇ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿಕೊಂಡು ಹೊಡೆದಾಡಿಕೊಂಡು ಬೈದಾಡಿಕೊಂಡಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಈ ಘಟನೆಯ ಬಗ್ಗೆ ರಾತ್ರಿ ಗಸ್ತಿನಲ್ಲಿದ್ದ ಎ.ಎಸ್.ಐ ಮೋಹನ್ ದಾಸ್ ನೀಡಿದ ದೂರಿನಂತೆ ಆರೋಪಿಗಳ ವಿರುದ್ದ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 203/2025 ಕಲಂ: 194(2) ಬಿ.ಎನ್.ಎಸ್ -2023 ರಂತೆ ಪ್ರಕರಣ ದಾಖಲಿಸಲಾಗಿದೆ.
