ಉಡುಪಿ:ದೆಹಲಿ ಸ್ಪೋಟ ಖಂಡಿಸಿ ಹಿಂದೂ ಜಾಗರಣ ವೇದಿಕೆಯಿಂದ ಪ್ರತಿಭಟನೆ

ಹಿಂಜಾವೇ ಪ್ರತಿಭಟನೆ


ಉಡುಪಿ: ಹಿಂದು ಜಾಗರಣ ವೇದಿಕೆ ವತಿಯಿಂದ ಉಡುಪಿಯಲ್ಲಿಂದು ಪ್ರತಿಭಟನೆ ನಡೆಯಿತು.ಮುಖ್ಯವಾಗಿ ದೆಹಲಿಯಲ್ಲಿ ನಡೆದ ಇಸ್ಲಾಮಿಕ್ ಭಯೋತ್ಪಾದನೆಯ ಕೃತ್ಯವನ್ನು ಖಂಡಿಸಿ ಈ  ಪ್ರತಿಭಟನೆ ನಡೆಯಿತು.ನಗರದ ಜಡ್ಕ ಸ್ಟ್ಯಾಂಡ್ ಬಳಿ ನಡೆದ ಪ್ರತಿಭಟನೆಯಲ್ಲಿ ಹಿಂದೂ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರು ಭಾಗಿಯಾದರು.

ಪ್ರತಿಭಟನೆಯಲ್ಲಿ ದೆಹಲಿಯ ಉಗ್ರಕೃತ್ಯವನ್ನು ಖಂಡಸಲಾಯಿತು.ಈ ವೇಳೆ ಮಾತನಾಡಿದ ಮುಖಂಡ ಸುನಿಲ್ ಕೆ.ಆರ್ ,ಇವತ್ತು ದೆಹಲಿ ಸ್ಪೋಟದಲ್ಲಿ ವೈದ್ಯರ ಪಾತ್ರ ಇರುವುದು ಸಾಬೀತಾಗಿದೆ.ಎಲ್ಲೆಡೆ ಉಗ್ರ ಕೃತ್ಯ ನಡೆಸಿ ಇಸ್ಲಾಮಿಕ್ ದೇಶ ಮಾಡುವ ಮತ್ತು‌ ಕಾಫಿರರನ್ನು ಕೊಲ್ಲುವ ಹುನ್ನಾರ ಇದರ ಹಿಂದೆ ಇದೆ.ಇದನ್ನು ಬೇರು ಸಮೇತ ನಿರ್ನಾಮ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಸಮಸ್ಯೆ ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆ ಎಂದರು.