![]() |
| SDPI ನಿಂದ ಮನವಿ |
ದೊಡ್ಡಬಳ್ಳಾಪುರ ಮುಸ್ಲಿಂ ಯೂತ್ ಅಸೋಸಿಯೇಶನ್ ಮಂಡಳಿ ಚುನಾವಣೆ ನಡೆಸುವಂತೆ ವಕ್ಫ್ ಬೋರ್ಡ್ ರಾಜ್ಯ ಮತ್ತು ಜಿಲ್ಲಾ ಅಧಿಕಾರಿಗಳಿಗೆ SDPI ದೊಡ್ಡಬಳ್ಳಾಪುರ ತಾಲೂಕು ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.ಬೈಲಾ ತಿದ್ದುಪಡಿ ಮಾಡಿ ಚುನಾವಣೆ ನಡೆಸಿಕೊಡಲು ಅಧಿಕಾರಿಗಳು ಒಪ್ಪಿಕೊಂಡಿದ್ದು ,ಯಾವುದೇ ಅಡಾಪ್ಟ್ ಕಮಿಟಿಗಳಿಗೆ ಇನ್ನು ಅವಕಾಶ ಕೊಡುವುದಿಲ್ಲ. ಡಿಸೆಂಬರ್ 5 ರ ನಂತರ ದೊಡ್ಡಬಳ್ಳಾಪುರ ಮುಸ್ಲಿಂ ಯೂತ್ ಮಂಡಳಿ ಚುನಾವಣೆಯ ಪ್ರಕ್ರಿಯೆಗಳನ್ನು ಪ್ರಾರಂಭ ಮಾಡಲಾಗುವುದು ಅಂತ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ SDPI ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಫಯಾಜ್, ಪ್ರಧಾನ ಕಾರ್ಯದರ್ಶಿ ನೂರ್ ಅಹಮದ್, ಕಾರ್ಯದರ್ಶಿ ಇಲ್ಯಾಜ್,ಸದಸ್ಯರು ಖಾಲಿದ್ ಮತ್ತು ಬಾಬಾ ಹಾಜರಿದ್ದರು.
