ಉಡುಪಿ: ಇಂದು , ನವೆಂಬರ್ 14 ರಂದು ಸಂಜೆ 4.30 ಗೆ ಸಾವಣ್ಣ ಪ್ರಕಾಶನದ ನನ್ನ ಎರಡು ಪುಸ್ತಕಗಳು" ಮಕ್ಕಳು ಮಕ್ಕಳಾಗಿರಲು ಬಿಡಿ" ಮತ್ತು" ಓ ಮನಸೇ ತುಸು ನಿಧಾನಿಸು " ಲೋಕಾರ್ಪಣೆ ಕೊಳ್ಳುತ್ತಿವೆ. ರತ್ನಶೀಲ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷರಾದ ಮನು ಹಂದಾಡಿ, ಎಸ್ ಎಂ ಎಸ್ ಶಾಲೆ ಬ್ರಹ್ಮಾವರದ ಪ್ರಾಂಶುಪಾಲರಾದ ಶ್ರೀಮತಿ ಅಭಿಲಾಷಾ ಹಂದೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣಿಪಾಲದ ಸೋನಿಯಾ ಕ್ಲಿನಿಕ್ ಮತ್ತು ನರ್ಸಿಂಗ್ ಹೋಂ ನ ನಿರ್ದೇಶಕಿ ಡಾ.ಗಿರಿಜಾ ಅವರು ವಹಿಸಿಕೊಳ್ಳಲಿದ್ದಾರೆ. ವಿಶ್ವ ವಿಖ್ಯಾತ ಜಾದೂಗಾರರಾದ ಜೂನಿಯರ್ ಶಂಕರ್ (ತೇಜಸ್ವಿ) ಯವರು "ದ ಮ್ಯಾಜಿಕ್ ಆಫ್ ಪೇರೆಂಟಿಂಗ್" ವಿಶೇಷ ಮ್ಯಾಜಿಕ್ ಶೋ ನಡೆಸಿ ಕೊಡಲಿದ್ದಾರೆ. ವಿಶೇಷ ಮಕ್ಕಳ ಚಿತ್ರಕಲಾ ಪ್ರದರ್ಶನ ನಡೆಯಲಿದೆ. ಸ್ಥಳ: ಇನ್ಫೋಸಿಸ್ ಯಕ್ಷಗಾನ ಕಲಾರಂಗ ಹಾಲ್ , ಶಾರದಾ ಕಲ್ಯಾಣ ಮಂಟಪ ರಸ್ತೆ ಉಡುಪಿ. ನಿಮಗೆಲ್ಲ ಹೃತ್ಪೂರ್ವಕ ಸ್ವಾಗತ -- ಡಾ. ವಿರೂಪಾಕ್ಷ ದೇವರಮನೆ.
