ಉಡುಪಿ: ಮೋದಿ ಭೇಟಿ - ನ. 28ರಂದು ಉಡುಪಿ ನಗರದ ವಾಹನ ಸಂಚಾರದಲ್ಲಿ ಮಾರ್ಪಾಡು

ಸಾಂದರ್ಭಿಕ ಚಿತ್ರ

ಉಡುಪಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನ. 28ರಂದು ಉಡುಪಿಗೆ ಆಗಮಿಸುವ ಹಿನ್ನೆಲೆಯಲ್ಲಿ ಸಂಚಾರ ನಿಷೇಧ ಮತ್ತು ಬದಲಿ ಮಾರ್ಗದ ಕುರಿತು ಜಿಲ್ಲಾಡಳಿದ ಅಧಿಸೂಚನೆ ಹೊರಡಿಸಿದೆ. ನ. 28ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 3ರ ವರೆಗೆ ಈ ಬದಲಾವಣೆ ಇರಲಿದೆ.

ಆದಿ ಉಡುಪಿ ಹೆಲಿಪ್ಯಾಡ್‌ನಿಂದ ಕರಾವಳಿ ಜಂಕ್ಷನ್ - ಬನ್ನಂಜೆ-ಶಿರಿಬೀಡು-ಕಲ್ಸಂಕ- ಶ್ರೀ ಕೃಷ್ಣಮಠದವರೆಗೆ ಯಾವುದೇ ವಾಹನಗಳ ಸಂಚಾರ ಮತ್ತು ನಿಲುಗಡೆ ನಿಷೇಧಿಸಿದೆ.

ಮಣಿಪಾಲದಿಂದ ಉಡುಪಿ ಕಡೆಗೆ ಬರುವ ಎಲ್ಲ ವಾಹನಗಳು ಶಾರದಾ ಕಲ್ಯಾಣ ಮಂಟಪ- ಬೀಡಿನಗುಡ್ಡೆ ಮಾರ್ಗವಾಗಿ ಉಡುಪಿಗೆ ಬರಬೇಕು.

ಕುಂದಾಪುರದಿಂದ ಉಡುಪಿ ಕಡೆಗೆ ಬರುವ ವಾಹನಗಳು ಕರಾವಳಿ ಫ್ಲೈ ಓವರ್ - ಅಂಬಲಪಾಡಿ - ಬ್ರಹ್ಮಗಿರಿ-ಜೋಡುಕಟ್ಟೆಮಾರ್ಗವಾಗಿ ಉಡುಪಿಗೆ ಬರಬೇಕು.

ಮಂಗಳೂರಿನಿಂದ ಉಡುಪಿಗೆ ಬರುವ ವಾಹನಗಳು ಕಿನ್ನಿಮೂಲ್ಕಿ  ಸ್ವಾಗತಗೋಪುರ-ಜೋಡುಕಟ್ಟೆಯಾಗಿ ಉಡುಪಿಗೆ ಬರಬೇಕು.

ಅಂಬಾಗಿಲಿನಿಂದ ಗುಂಡಿಬೈಲು ಮಾರ್ಗವಾಗಿ ಉಡುಪಿಗೆ ಬರುವ ಎಲ್ಲ ವಾಹನಗಳು ಗುಂಡಿಬೈಲು - ದೊಡ್ಡಣಗುಡ್ಡೆ-ಎಂಜಿಎಂ-ಎಸ್ ಕೆಎಂ-ಬೀಡಿನಗುಡ್ಡೆ ಮೂಲಕ ಉಡುಪಿಗೆ ಬರಬೇಕು.

ಮಲ್ಪೆಯಿಂದ ಬರುವ ಎಲ್ಲ ವಾಹನಗಳು ಕುತ್ಪಾಡಿ ಮಾರ್ಗವಾಗಿ ಅಂಬಲಪಾಡಿ ಮೂಲಕ ಉಡುಪಿಗೆ ಬರಬೇಕು.

ಈ ನಿಷೇಧವು ವಿವಿಐಪಿ ವಾಹನ, ಸರಕಾರಿ ವಾಹನ ಮತ್ತು ಎಲ್ಲ ರೀತಿಯ ತುರ್ತು ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.