ಕುಂದಾಪುರ: ಬೈಕ್ ನಲ್ಲಿ ಬಂದು ಮಹಿಳೆಯ ಚಿನ್ನದ ಕರಿಮಣಿ ಸರ ಸುಲಿಗೆ- ಇಬ್ಬರ ಬಂಧನ

 

ಸಂಜಯ್ , ವಸಂತ್ ಕುಮಾರ್

ಕುಂದಾಪುರ: ಮೀನಾಕ್ಷಿ ಮತ್ತವರ  ಮಗಳು ಜ್ಯೋತಿ ಎಂಬಿಬ್ಬರು   ಕುಂದಾಪುರ  ಶಾಸ್ತ್ರಿ ಪಾರ್ಕ್ ಕಡೆಗೆ  ನಡೆದುಕೊಂಡು ಹೋಗುತ್ತಿರುವಾಗ ಬೈಕ್ ನಲ್ಲಿ‌ ಬಂದು ಕರಿಮಣಿ ಸರ  ಸುಲಿಗೆ ಮಾಡಿ ಹೋಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಅಪರಾಧ ಕ್ರಮಾಂಕ :  125/2025 ಕಲಂ: 309(4) BNS Act ರಂತೆ ಪ್ರಕರಣ ದಾಖಲಾಗಿತ್ತು. 

ಈ ಪ್ರಕರಣದ  ತನಿಖಾಧಿಕಾರಿ ಜಯರಾಮ ಡಿ. ಗೌಡ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ,ಆರೋಪಿಗಳಾದ ಸಂಜಯ್‌ ಎಲ್‌ (33) ಮತ್ತು  ವಸಂತ   ಕುಮಾರ್‌  (30) ಎಂಬಿಬ್ಬರು ಆರೋಪಿಗಳನ್ನು ಬಂಧಿಸಿದೆ.  ಆರೋಪಿಗಳಿಂದ ಚಿನ್ನದ ಕರಿಮಣಿ ಚೈನ್ ,  ಅಂದಾಜು ಮೌಲ್ಯ ರೂ. 3.00.000 ಹಾಗೂ   ಕಾರು ಮತ್ತು ಬೈಕ್  ವಶಪಡಿಸಿಕೊಳ್ಳಲಾಗಿದೆ.